ಹಾಸನ 07; ಹಾಸನದ ಗೊರೂರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿ, ಕನ್ನಡ ಸಾಹಿತ್ಯವನ್ನು ಗಟ್ಟಿಗೊಳಿಸಿದವರು ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರರು ಎಂದು ಯೋಗ ಶಿಕ್ಷಕ ಎಚ್ ಬಿ ರಮೇಶ್ ಹೆಳಿದರು.ಅವರು ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಾಹಿತಿ ಗೊರೂರು ಶಿವೇಶ್ ಪ್ರಾಯೋಜಕತ್ವದಡಿಯಲ್ಲಿ ನಡೆದ 208ನೆಯ ಮನೆ-ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಡಾ.ಗೊರೂರು ಅವರ ಬದುಕು ಮತ್ತು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿ ಹಾಸನ ಜಿಲ್ಲೆಯ ಹೇಮಾವತಿ ತೀರದ ಗೊರೂರು ನಾಡಿನ ಇತರ ಎಷ್ಟೋ ಊರೂಗಳಂತೆ ಒಂದು ಸಾಮಾನ್ಯ ಹಳ್ಳಿ, ಅದಕ್ಕೆ ದೊರೆತಿರುವ
ಗೊರೂರರ ಕಥೆಗಳು,ಲಲಿತ ಪ್ರಬಂಧ, ಜೀವನಚರಿತೆ,್ರ ಕಾದಂಬರಿ, ಪ್ರವಾಸ ಕಥನ, ಜಾನಪದ ಸಾಹಿತ್ಯ, ಅನುವಾದಗಳು ಹೀಗೆ ಅನೇಕ ರೀತಿಯ ವೈವಿದ್ಯಮಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.ಇವರ ‘ಅಮೇರಿಕಾದಲ್ಲಿ ಗೊರೂರು’ ಎಂಬ ಕೃತಿ ಒಳ್ಳೆಯ ಹೆಸರನ್ನು ತಂದು ಕೊಟ್ಟಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನವಾಗಿದೆ.
ಇವರ ಭೂತಯ್ಯನ ಮಗ ಅಯ್ಯ, ಊರ್ವಶಿ ಕಾದಂಬರಿಗಳು ಚಲನ ಚಿತ್ರಗಳಾಗಿ ಜನ ಮನ್ನಣೆ ಪಡೆದಿವೆ. ನಮ್ಮೂರ ರಸಿಕರು, ಹಳ್ಳಿ ಹಾಡುಗಳು ಮುಂತಾದ ಕೃತಿಯಲ್ಲಿ ವ್ಯಂಗ ಹಾಸ್ಯಗಳೊಂದಿಗೆ ಗ್ರಾಮೀಣ ಸೊಗಡನ್ನು ಚಿತ್ರಿಸಿದ್ದಾರೆ. ಗೊರೂರು ನನ್ನಂತಹ ಅನೇಕ ಬರಹಗಾರರಿಗೆ ಸ್ಪೂರ್ತಿಯಾಗಿದ್ದಾರೆ.
ನಂತರ ಕವಿ ಗೋಷ್ಠಿಯ ಆಶಯ ನುಡಿಗಳನ್ನಾಡಿದ ಕ.ಸಾ.ಪ. ಜಿಲ್ಲಾಧ್ಯóಕ್ಷರಾದ ಡಾ.ಎಚ್ ಎಲ್ ಜನಾರ್ಧನ್ ಮಾತನಾಡಿ ಹಾಸನ ಜಿಲ್ಲೆಯಲ್ಲಿ ಸಾಹಿತ್ಯಿಕ ಹಾಗೂ ಸಾಂಕೃತಿಕವಾಗಿ ಭದ್ರವಾದ ನೆಲೆಗಟ್ಟನ್ನು ಕಟ್ಟಿಕೊಡುವಲ್ಲಿ ದಶಕಗಳಿಂದಲೂ ಮನೆ-ಮನೆ ಕವಿ ಗೋಷ್ಠಿ ಸಂಘಟನೆಯ ಶ್ರಮ ಅವಿಸ್ಮರಣೀಯ. ನಾಡು-ನುಡಿ ಹಿತ ಚಿಂತನಾ, ಚರ್ಚಾ ಗೋಷ್ಠಿಗಳಿಗೆ ಪರಿಷತ್ತು ಸದಾ ಕೈ ಜೋಡಿಸುತ್ತದೆ. ಗೊರೂರಂತೆ ಇನ್ನಿತರ ಹಿರಿಯ ಸಾಹಿತಿಗಳ ಕುರಿತು ಚರ್ಚಾಗೋಷ್ಠಿಗಳು ನಡೆಯಬೇಕಿದೆ ಎಂದರು.
ಎನ್ ಎಲ್ ಚನ್ನೆಗೌಡರು ‘ನಾ ಮೆಚ್ಚಿದ ಕವಿತೆ ಎಂಬ ವಿಷಯದಡಿ ದೇವನೂರು ಮಹಾದೆವರ ಲಾಲಿ ಹಾಡು ಎಂಬ ಕವನವನ್ನು ವಾಚಿಸಿ ವಿಷ್ಲೇಶಿಸುವುದರ ಜೊತೆಗೆ ಇನ್ನಿತರರÀ ಕವಿತೆಗಳನ್ನು ಪ್ರಶಂಸಿದರು.ವೇದಿಕೆಯಲ್ಲಿ ಡಾ.ಕೆ ಕೆ ಜಯಚಂದ್ರಗುಪ್ತ, ಜ. ಹೊ. ನಾರಾಯಣಸ್ವಾಮಿ , ಗೊರೂರು ಶಿವೇಶ್ ಸಂಚಾಲಕ ಕೊಟ್ರೆಶ್ ಎಸ್ ಉಪ್ಪಾರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಸಮ್ಮೆಳನ ಅಧ್ಯಕ್ಷರಾಗಿ ಆಯ್ಕೆಗೊಂಡ ಆಲೂರಿನ ವಳಗರಹಳ್ಳಿ ವಿಶ್ವನಾಥ್, ಸಕಲೇಶಪುರದ ಸುಶೀಲಾ ಸೋಮಶೇಖರ, ಹೊಳೆನರಸಿಪುರದ ಕೌಂಡಿನ್ಯವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ನಂತರ ನಡೆದ ಕವಿ ಗೋಷ್ಠಿಯಲ್ಲಿ ಶೀಟಿ ;ಬಿ ಎಂ ಭಾರತಿ ಹಾದಿಗೆ, ಶ್ರೀವಿಜಯ ಹಾಸನ, ಲಲಿತ ಎಸ್, ಶಾಂತ ಅತ್ನಿ, ಗೊರೂರು ಅನಂತರಾಜು, ನಾಗರಾಜ್ ಹೆತ್ತೂರು, ಪವನ್‍ಕುಮಾರ್ ಸಮುದ್ರವಳ್ಳಿ ವಾಸು, ಚೂಡಾಮಣಿ, ಸುಕನ್ಯ ಮುಕುಂದ, ಗಂಗಾಧರ, ದ್ಯಾವನೂರು ಮಂಜುನಾಥ, ಡಾ|| ಕೆ.ಕೆ ಜಯಚಂದ್ರಗುಪ್ತ, ಜ.ಹೊ.ನಾರಾಯಣಸ್ವಾಮಿ ಮುಂತಾದವರು ಕಾವ್ಯ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಅಹಮದ್ ಹಗರೆ, ಬಿ. ವೇದಾವತಿ, ಜಯದೇವಪ್ಪ, ಚಂದ್ರಶೇಖರ್, ಸತ್ಯಸುಬ್ರಮಣ್ಯ, ರಂಗೇಗೌಡ, ಸಿ ಕೆ ಹರೀಶ್ ಇತರರು ಭಾಗವಹಿಸಿದ್ದರು.
ಸಂಚಾಲಕರಾದ ಕೊಟ್ರೇಶ್ ಎಸ್.ಉಪ್ಪಾರ್ ಸ್ವಾಗತಿಸಿ, ನಿರೂಪಿಸಿದರು. ಗೊರೂರು ಶಿವೇಶ್ ವಂದಿಸಿದರು.



0 comments:
Post a Comment