ಹಾಸನದ ರಂಗೋಲಿ ಹಳ್ಳದಲ್ಲಿರುವ ಯೋಗ ಗುರು ಸುರೇಶ್ ಗುರೂಜಿ ಅವರ ಪ್ರಾಯೋಜಕತ್ವದಲ್ಲಿ ವ್ಯಕ್ತಿತ್ತ್ವ ವಿಕಸನ ಕೇಂದ್ರದಲ್ಲಿ ನಡೆದ 209ನೆಯ ಮನೆ ಮನೆ ಕವಿಗೋಷ್ಠಿಯಲ್ಲಿ ‘ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಸ್ಲಾಮಿಕ್ ಸಾಹಿತ್ಯ’
ಸಾಹಿತ್ಯವು ಪ್ರಚಾರದ ಮಾಧ್ಯಮವಲ್ಲ. ಅದೊಂದು ಕತ್ತು ಕೊಡುವ ಪರಿ. ಸ್ವಾತಂತ್ರ್ಯ ಸಂಗ್ರಾಮದ ಒಂದೆರಡು ದಶಕದ ಹಿಂದುಮುಂದು ಹುಟ್ಟಿದಂತಹ ಪ್ರಬುದ್ಧ ಸಾಹಿತ್ಯ ಮತ್ಯಾವ ಕಾಲ ಘಟ್ಟದಲ್ಲಿಯೂ ರಚನೆಯಾಗಲಿಲ್ಲ. ಹಿಂದೂ ಇಸ್ಲಾಂ ಸೇರಿ ಸೂಫಿ ಚಳವಳಿ ಹುಟ್ಟಿತು. ಕೆ.ಎಂ. ಅಬ್ಬಾಸ್ ಅವರ ಕೊಡುಗೆ ಅತ್ಯಮೂಲ್ಯವಾದುದು ಎಂದರು.
`ನಾ ಮೆಚ್ಚಿದ ಕವಿತೆ’ ಬಗ್ಗೆ ಡಾ|| ಕೆ.ಕೆ. ಜಯಚಂದ್ರಗುಪ್ತ ಮಾತನಾಡಿದರು. ನಂತರ ನಡೆದ ಕವಿ ಗೋಷ್ಠಿಯಲ್ಲಿ ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್, ಎನ್.ಎಲ್. ಚನ್ನೇಗೌಡ, ಚಂದ್ರಕಾಂತ ಪಡೆಸೂರ, ಸುಶೀಲ ಸೋಮಶೇಖರ್, ಶ್ರೀವಿಜಯ ಹಾಸನ, ನವಾಬ್ ಬೇಲೂರು, ಭಾರತಿ ಹಾದಿಗೆ, ಪವನ್ ಆಲೂರು, ವಾಸು ಸಮುದ್ರವಳ್ಳಿ, ಚೂಡಾಮಣಿ, ಸರೋಜ, ಲಲಿತ, ಬಿ. ವೇದಾವತಿ, ಗೊರೂರು ಅನಂತರಾಜು, ಮನೋಹರ ತಿಪಟೂರು, ಸಾತ್ವಿಕ್, ಪ್ರಮೋದ್ ಬೆಳಗೋಡು ಮುಂತಾದವರು ಕವಿತೆ ವಾಚಿಸಿದರು.
ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್ ನಿರೂಪಿಸಿದರು, ಚಂದ್ರಕಾಂತ ಪಡೆಸೂರ ಸ್ವಾಗತಿಸಿದರು, ಸುರೇಶ್ ಗುರೂಜಿ ಪ್ರಾರ್ಥಿಸಿ, ವಂದಿಸಿದರು.



0 comments:
Post a Comment