Subscribe:

Ads 468x60px

ಇಲ್ಲಿ ಯಾರು ಮುಖ್ಯರಲ್ಲ, ಇಲ್ಲಿ ಯಾರು ಅಮುಖ್ಯರಲ್ಲ.

210ನೆಯ ಮನೆ ಮನೆ ಕವಿಗೋಷ್ಠಿ

ಹಾಸನ: ಅನಂತಮೂರ್ತಿಯವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕ ಶೂನ್ಯವಾಗಿದೆ. ಮಾನವ ಸಮುದಾಯ ಅನುಭವಿಸುತ್ತಿರುವ ಸಂಕಟ, ತೊಳಲಾಟ, ಅಂತಕ, ತಲ್ಲಣಗಳಿಗೆ ಮುಖಾಮುಖಿಯಾಗಿ ತಮ್ಮನ್ನು ತಾವು ತೆರೆದುಕೊಂಡು ವೈಚಾರಿಕ ನೆಲೆಗಟ್ಟಿನಲ್ಲಿ ರಚನೆಯಾದ ಅನಂತಮೂರ್ತಿಯವರ ಸಾಹಿತ್ಯ ಸರ್ವ ಶ್ರೇಷ್ಠವಾಗಿ, ಸಾರ್ವಕಾಲಿಕವಾಗಿ ನಿಲ್ಲುತ್ತದೆ ಎಂದು ಎವಿಕೆ ಕಾಲೇಜಿನ ಕನ್ನಡ ಪ್ರಾಧ್ಯಪಕರಾದ ಡಾ|| ಸಿ.ಚ.ಯತೀಶ್ವರ್ ರವರು ಹೇಳಿದರು.
ಅವರು ಕವಿ ಗಂಗಾಧರವರ ಪ್ರಾಯೋಜಕತ್ವದಲ್ಲಿ ನಗರದ ಭಾರತಿ ವಿಧ್ಯ ಮಂದಿರದಲ್ಲಿ ನಡೆದ 210ನೆಯ ಮನೆ ಮನೆ ಕವಿಗೋಷ್ಠಿಯಲ್ಲಿ ‘ಡಾ|| ಯು.ಆರ್.ಅನಂತಮೂರ್ತಿಯವರ ಸಾಹಿತ್ಯ ಮತ್ತು ಬದುಕು’ ಎಂಬ ವಿಷಯದಡಿ ಉಪನ್ಯಾಸ ನೀಡಿದರು.

ಅಗ್ರಹಾರ ಸಂಸ್ಕøತಿಯ ಬಂಧನದಲ್ಲಿರುವ ಆಚರಣೆಗಳು, ಮನುಷ್ಯ ಮನುಷ್ಯರ ನಡುವಿನ ಕಂದಕಗಳನ್ನು ದಿಕ್ಕರಿಸಿ ಬದುಕಿ ಅದರಂತೆ ಸಾಹಿತ್ಯ ರಚಿಸಿದ ಅನಂತಮೂರ್ತಿಯವರು ಜಗತ್ತಿಗೆ ತಮ್ಮನ್ನು ತಾವು ತೆರೆದು ಕೊಳ್ಳುತ್ತ ಹೋದವರು. ಹೊಸ ವಿಚಾರಧಾರೆಗಳು ಮೂಡಲು ಅವರ ತಂದೆ ಸಾಂಪ್ರದಾಯಿಕತೆಯಿಂದ ಮುಕ್ತ ಹೊಂದಿ ವೈಚಾರಿಕತೆಯ ಅಡಿಯಲ್ಲಿ ಬದುಕಿದ ರೀತಿ ಅನಂತಮೂರ್ತಿಯವರಿಗೆ ಸ್ಪೂರ್ತಿದಾಯಕವಾಗಿದೆ.
ಇವರು ಹಾಸನದಲ್ಲಿ ಒಂದೂವರೆ ವರ್ಷಗಳ ಕಾಲ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಅವರು ಹಾಸನದ ಅಳಿಯ ಎಂಬುವುದು ನಮ್ಮೆಲ್ಲರಿಗೂ ಹೆಮ್ಮಯ ವಿಷಯವಾಗಿದೆ.
ಅವರ ‘ಸಂಸ್ಕಾರ’ ಕಾದಂಬರಿಯು ಅನಂತಮೂರ್ತಿಯವರ ಸಾಹಿತ್ಯ ಬದುಕಿನಲ್ಲಿ ಒಂದು ಮೈಲುಗಲ್ಲನ್ನು ಸೃಷ್ಟಿಸಿತೆನ್ನ ಬಹುದು. 1973ರಲ್ಲಿ ಬಂದ ಅವರ ‘ಭಾರತೀಪುರ’ ಕಾದಂಬರಿಯಲ್ಲಿ ಹಳ್ಳಿಯಲ್ಲಿ ಇರಬಹುದಾದ ಜಾತಿ ಪದ್ದತಿ, ಅಸ್ಪøಶ್ಯತೆ, ದೇವಾಲಯ ನಿರ್ಬಂಧ ಮುಂತಾದ ಶೋಷಣಾ ವಿಧಿಗಳ ವಿರುದ್ದ ಧ್ವನಿ ಎತ್ತಿದ್ದಾರೆ.
ಗಾಂಧೀಜಿಯವರ ತತ್ತ್ವಾದರ್ಶಗಳಿಗೆ ಮಾರು ಹೋಗಿದ್ದ ಮೂರ್ತಿಯವರು ಅದರಂತೆಯೆ ಬಾಳ ಬದುಕಿದರು. ಇವರ ಅವಸ್ಥೆ ಕಾದಂಬರಿಯು ಸಾಮಾಜಿಕ ಅನಿಷ್ಠಗಳ ಬದಲಾವಣೆಯನ್ನು ಬಯಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಒಬ್ಬ ಶಿಕ್ಷಣ ತಜ್ಞನಿಗೆ ಇರಬೇಕಾದ ದೂರ ದೃಷ್ಠಿಕೋನದ ಸಕಾರತ್ಮಾಕ ಚಿಂತನೆಗಳು ಅನಂತಮೂರ್ತಿಯವರಲ್ಲಿ ಅಂತರ್ಗತವಾಗಿದ್ದವು ಎಂದರು.
ಇತ್ತೀಚೆಗೆ ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಡಾ|| ಯು.ಆರ್.ಅನಂತಮೂರ್ತಿಯವರಿಗೆ ಕಾರ್ಯಕ್ರಮದಲ್ಲಿ ಒಂದು ನಿಮಿಷದ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.
ನಂತರ ‘ನಾ ಮೆಚ್ಚಿದ ಕವಿತೆ’ ಎಂದ ಶೀರ್ಷಿಕೆಡಿಯಲ್ಲಿ ಕವಯತ್ರಿ ಶಾಂತ ಅತ್ನಿಯವರು ವಿಜಯ ದಬ್ಬೆಯವರ ‘ರಾಣಿಯ ತಿಮ್ಮಿಯ ಸಿಂಹಾಸನ’ ಎಂಬ ಕವಿತೆಯನ್ನು ವಿಶ್ಲೇಷಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಸಂಚಾಲಕರಾದ ಕೊಟ್ರೇಶ್ ಎಸ್. ಉಪ್ಪಾರ್, ಶೀಟಿ, ಡಾ|| ಜಯಚಂದ್ರ ಗುಪ್ತ, ಟಿ.ಎಂ.ಸರೋಜ, ಬಿ.ಎಸ್.ವನಜಾಕ್ಷಿ, ಲಲಿತ ಎಸ್, ಪ್ರಮೋದ್ ಬೆಳಗೋಡು, ಸುರೇಶ್ ಗುರೂಜಿ, ಪವನ್ ಆಲೂರು, ರವಿ ಶಿವಮೊಗ್ಗ, ಚಂದ್ರಕಾಂತ್ ಪಡೇಸೂರ, ದ್ಯಾವನೂರು ಮಂಜುನಾಥ್, ಸುಕನ್ಯ ಮುಕುಂದ, ಗೊರೂರು ಶಿವೇಶ್, ರಾಜೇಶ್ವರಿ ಹುಲ್ಲೇನಹಳ್ಳಿ ಮುಂತಾದವರು ಕಾವ್ಯ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ಕವಿ ಎನ್.ಗಂಗಾಧರ್, ಜಯದೇವಪ್ಪ, ದಾಕ್ಷಾಯಿಣಿ ಜಿ.ಕೆ, ರಾಮಲಿಂಗಪ್ಪ, ಭಾರತಿ ಹಾದಿಗೆ, ರಮೇಶ್  ಮುಂತಾದವರು ಹಾಜರಾಗಿದ್ದರು.
ಸಂಚಾಲಕರಾದ ಕೊಟ್ರೇಶ್ ಎಸ್. ಉಪ್ಪಾರ್ ಸ್ವಾಗತಿಸಿ , ನಿರೂಪಿಸಿ, ವಂದಿಸಿದರು.




















0 comments:

Post a Comment

 
Blogger Templates