Subscribe:

Ads 468x60px

ಇಲ್ಲಿ ಯಾರು ಮುಖ್ಯರಲ್ಲ, ಇಲ್ಲಿ ಯಾರು ಅಮುಖ್ಯರಲ್ಲ.

Featured Posts

ಜೀವನ

ಸೃಷ್ಠಿಯ ಚಲನೆಯಲ್ಲಿ
ಹುಟ್ಟು ಸಾವಿನ ಏಣಿಯಾಟ
ಹುಟ್ಟಿನ ಹಿಂದೆ ಸಾವು
ನೋವಿನ ಹಿಂದೆ ನಲಿವು
ಈ ಜೀವನ ಮೂರು ದಿನದ ಸಂತೆ.
ಸುಖಃ ಕಾಣದ ಇರುಳು
ಬೆವರರಿಯುವ ಹಗಲು
ಯಾಂತ್ರೀಕತೆಯ ಜೀವಜಂಜಾಟ
ಬದುಕೆಲ್ಲಾ ಬರೀ ಕತ್ತಲು
ಈ ಜೀವನ ಮೂರು ದಿನದ ಸಂತೆ.
ಜಗವೊಂದು ನಾಟಕರಂಗ
ಸೂತ್ರದಾರನೊಬ್ಬ
ಪಾತ್ರದಾರಿ ಮತ್ತೊಬ್ಬ
ಬಗೆ ಬಗೆ ವೇಷ ಬಣ್ಣದ ನಟನೆ
ಆಡಿಸುವಾತನ ಕೈಚಳಕ
ಈ ಜೀವನ ಮೂರು ದಿನದ ಸಂತೆ.
ಆಸೆಯೆಂಬ ಬಿಸಿಲುಕುದುರೆಯನೇರಿ
ಹೆಣ್ಣು ಹೊನ್ನು ಮಣ್ಣಿನ ವ್ಯಾಮೋಹಕ್ಕೆ ಸಿಲುಕಿ ದ್ವೇಷ ಅಸೂಯೆಯ ಕಿಚ್ಚುಹಚ್ಚಿ ಚಿಂತೆಯೊಳಗೊಂದು ಸಂತೆಯ ಮುಗಿಸಿ ಕಡೆಗೆ ನಡೆಯುವರೆಲ್ಲ ಬರಿಗೈಲಿ                   
ಈ ಜೀವನ ಮೂರುದಿನದ ಸಂತೆ.
    --------ಪರಮೇಶ್ ಮಡಬಲು

ನಾಯಿ

ಆದಿ ಪ್ರಾಸರಹಿತ ಭೋಗ ಷಟ್ಪದಿ ಛಂದಸ್ಸಿನಲ್ಲಿ ರಚಿಸಿರುವ ಮಕ್ಕಳ ಪದ್ಯ
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
     
     -1-
ನನ್ನ ಹಳ್ಳಿಯಲ್ಲಿ ನಮ್ಮ
ಮುಗ್ದ ಜನರು ಲಲ್ಲೆಯಿಂದ
ರಾಮ, ಭೀಮ, ಸೋಮ, ಕಾಳ ಎಂದು ಕರೆವರು |
ಅಂದು ಮಾಡಿದಂಥ ಅಡುಗೆ
ಜೋಳ ರೊಟ್ಟಿ, ರಾಗಿ ಮುದ್ದೆ
ಚೀಪಿ ಬಿಟ್ಟ ಮೂಳೆಗಳನು ತಂದು ಕೊಡುವರು ||01||
ಹೊಟ್ಟೆ ತುಂಬ ತಿಂದು ತೇಗಿ
ರಾತ್ರಿಯೆಲ್ಲ ಪಾಳೆಕಾದು
ನಮ್ಮ ಬೀದಿ ಬಂಧುಗಳಿಗೆ ನಿಷ್ಠೆ ಮೆರೆವೆವು |
ಬೀದಿ ಮಾತ್ರ ನಮ್ಮ ಎಲ್ಲೆ
ಅದರ ಆಚೆ ಬೇರೆಯವರು
ನಮ್ಮ ಹಾಗೆ ಹಗಲು ರಾತ್ರಿ ಕಾಯುತಿರುವರು ||02||

241 ನೆಯ ಮನೆ ಮನೆ ಕವಿಗೋಷ್ಠಿ


ಹಾಸನ : ಕನ್ನಡ ಸಾಹಿತ್ಯ ಸಾಂಸ್ಕøತಿಕ ನೆಲೆಗಟ್ಟಿನಲ್ಲಿ ಇಡಿ ರಾಷ್ಟ್ರದಲ್ಲಿಯೇ ವಿಶಿಷ್ಟ್ಯ ಸ್ಥಾನಮಾನವನ್ನು ಪಡೆದಿದೆ. ಕನ್ನಡದ ಕವಿಗಳು ಹಬ್ಬ ಹರಿದಿನಗಳು, ಆಚರಣೆಗಳನ್ನು ಪ್ರಾಚೀನಕಾಲದಿಂದಲೂ ವಿಶೇಷ ದೃಷ್ಠಿಕೋನಗಳಲ್ಲಿ ನೋಡುತ್ತಾ ಬಂದಿದ್ದಾರೆ. ಅದರಲ್ಲೂ ಯುಗಾದಿಯಂತಹ ಮಹತ್ವದ ಹಬ್ಬವನ್ನು ಬೇಂದ್ರೆ, ಅಡಿಗರು, ಕೆ.ಎಸ್.ನರಸಿಂಹಸ್ವಾಮಿ, ಕುವೆಂಪು, ಬಿ.ಎಂ.ಶ್ರೀ ಸೇರಿದಂತೆ ನೂರಾರು ಕವಿಗಳು ಈ ಹಬ್ಬದ ಮಹತ್ವವನ್ನು ತಮ್ಮದೇಯಾದ ಭಾವದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಚಿಂತಕರಾದ ಶ್ರೀ ಮುಕುಂದರವರು ಅಭಿಪ್ರಾಯಪಟ್ಟರು.
ಅವರು ಹಾಸನದ ಅಗ್ರಹಾರ ಬೀದಿಯಲ್ಲಿರುವ ‘ಕಾಮದೇನು’ ನಿಲಯದಲ್ಲಿ ಕವಯಿತ್ರಿ ಸುಕನ್ಯ ಮುಕುಂದರವರ ಪ್ರಾಯೋಜಕತ್ವದಲ್ಲಿ ನಡೆದ 241 ನೆಯ ಮನೆ ಮನೆ ಕವಿಗೋಷ್ಠಿಯಲ್ಲಿ “ಕನ್ನಡ ಕಾವ್ಯದಲ್ಲಿ ಯುಗಾದಿ” ಎಂಬ ವಿಷಯದಡಿ ಉಪನ್ಯಾಸ ನೀಡಿ ಕನ್ನಡದ ಕವಿಗಳು ಯುಗಾದಿ ಕುರಿತು, ಇಲ್ಲಿನ ಮಾಮರಗಳ ಕುರಿತು, ಕೋಗಿಲೆಗಳ ಇಂಪಾದ ಗಾನದ ಕುರಿತು ಮನಮೋಹಕವಾಗಿ ತಮ್ಮ ಕವಿತೆಗಳಲ್ಲಿ ಕಟ್ಟಿಕೊಡುವುದರ ಮೂಲಕ ಕನ್ನಡ ನಾಡಿನ ಶ್ರೇಷ್ಠತೆಯನ್ನು ಬಿಂಬಿಸುತ್ತಾ ಮಾನವೀಯ ಮೌಲ್ಯಗಳನ್ನು ಪಲ್ಲವಿಸಿದ್ದಾರೆ ಎಂದರು.

ಜ.ಹೊ.ನಾರಾಯಣಸ್ವಾಮಿ

 ಕೊಟ್ರೇಶ್ ಎಸ್.ಉಪ್ಪಾರ್

ಮಹಾಕವಿ ಕುವೆಂಪುರವರ ಬೆರಳೆಣಿಕೆಯ ಆಪ್ತ ಶಿಷ್ಯ ವೃಂದದಲ್ಲಿ ಜ.ಹೊ.ನಾ ಪ್ರಮುಖರು ಸಾಹಿತ್ಯ ವಲಯದಲ್ಲಿ ಆಲೋಚನೆಯ ದಾರಿದ್ರ್ಯ ಹಿಡಿದು ಸಂಪ್ರದಾಯ ನೇಣುಗಂಬಕ್ಕೆ ತುತ್ತಾದ ಸಂದರ್ಭದಲ್ಲಿ ಜ.ಹೊ.ನಾ ಅದಾರಾಚೆಯ ವೈಚಾರಿಕ ಲೋಕ ದರ್ಶನ ಮಾಡಿಸಿದವರು.
     ಅಕ್ಷರಶಃ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಅಂತರ್ಗತಗೊಳಿಸಿಕೊಂಡು, ಕುವೆಂಪುರವರ ಸನ್ಮಾರ್ಗದಲ್ಲಿ ಸಾಗಿ ಸಮಾಜದ ಸಂಪ್ರದಾಯ ಮನಸ್ಸುಗಳನ್ನು ಬಡಿದೆಬ್ಬಿಸಿ ವೈಜ್ಞಾನಿಕ ತಳಹದಿಯಲ್ಲಿ ಚಿಂತಿಸುವಂತೆ ಪ್ರೇರೇಪಿಸಿದವರು.
    ಕಾಲ ನಿಂತ ನೀರಲ್ಲ, ಸದಾ ಚಲನಶೀಲ. ಅಂತೆಯೇ ಸಾಹಿತ್ಯಿಕ ಆಲೋಚನೆಗಳು ಆಧುನಿಕತೆಗೆ ತಕ್ಕಂತೆ ವಿಚಾರಕ್ಕೆ ನಿಲುಕುವಂತೆ ತೆರೆದುಕೊಳ್ಳುತ್ತಾ ಸಾಗಬೇಕು. ಸಾಮಾಜಿಕ ಮೌಢ್ಯ ಸಂಪ್ರದಾಯಗಳ ಘೋರಿಯ ಮೇಲೆ ವೈಚಾರಿಕ ಹೂ ಗಿಡಗಳನ್ನು ಬೆಳೆಸುವ ದಿಸೆಯಲ್ಲಿ ಕಳೆದ ಐದಾರು ದಶಕಗಳಿಂದ ಮೂರ್ಖ ಸಂಪ್ರದಾಯಿಗಳ, ಕೋಮುವಾದಿಗಳ, ಜಾತಿವಾದಿಗಳ ವಿರೋಧಗಳ ನಡುವೆಯೂ ಎದೆಗುಂದದೆ ಮುನ್ನುಗ್ಗಿ ಬಂದ ಧೀಶಕ್ತಿ ಸಾಹಿತ್ಯ ಜ.ಹೊ.ನಾ ಅವರದ್ದು ಎಂದರೆ ಅತಿಶಯೋಕ್ತಿಯಾಗಲಾರದು.

222 ನೆಯ ಮನೆಮನೆ ಕವಿಗೋಷ್ಠಿ

 ಕಾವ್ಯದ ಅಭಿವ್ಯಕ್ತಿ ಒಂದು ಸುಂದರ ಅಭಿವ್ಯಕ್ತಿ, ಅದು ಸಹಜ ಮಾತಿಗಿಂತ ಭಿನ್ನವಾಗಿರುತ್ತದೆ. ಕಾವ್ಯ ಭಾಷೆ, ಅಲಂಕಾರಿಕ ಭಾಷೆಯಾಗಿರಬೇಕು, ಸಂಕೇತ, ಪ್ರತಿಮೆ, ಉಪಮೆಗಳಿಂದ ಒಡಗೂಡಿದ ಭಾಷೆ ಹಸಿಗೋಡೆಗೆ ಹರಳು ಹೊಡೆದಂತೆ ಅರ್ಥಸ್ಪುಟತೆಯನ್ನು ನೀಡುತ್ತದೆ ಎಂದು ಸಾಹಿತಿ ಚಂದ್ರಕಾಂತ ಪಡೆಸೂರ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ 222 ನೆಯ ಮನೆಮನೆ
ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕವಿಯಾದವನು ಪ್ರಕೃತಿಯೊಂದಿಗೆ ಮಾತನಾಡಬೇಕು.

222 ನೆಯ ಮನೆ ಮನೆ ಕವಿಗೋಷ್ಠಿಯಲ್ಲಿ `ಮನೆ ಮನೆ ಮಲ್ಲಿಗೆ’ ಕೃತಿ ಬಿಡುಗಡೆ


ಹಾಸನ, ಸೆ. 6: ಕನಿಷ್ಟ ಓದು ಬರಹದಂತಹ ಸಾಹಿತ್ಯ ಚಟುವಟಿಕೆಯೂ ಇಲ್ಲದ ಮನೆ ಮನೆಯಲ್ಲ; ಸುಡುಗಾಡು ಎಂದು ಕುವೆಂಪು ಅವರು ಅಂದೇ ಹೇಳಿದ್ದಾರೆ. ಈ ಹಿಂದೆ ಪ್ರತಿ ಮನೆಯಲ್ಲೂ ಸ್ವಲ್ಪ ಸಮಯವಾದರೂ ಕಾವ್ಯ ವಾಚನ, ಸಾಹಿತ್ಯದ ಓದು ಬರಹದ ಚಟುವಟಿಕೆ ಇರುತ್ತಿತ್ತು. ದುರದೃಷ್ಟವಶಾತ್ ಇಂದು ಟಿ.ವಿ, ಮೊಬೈಲ್, ವಾಟ್ಸಪ್‍ನಂತಹ ವಿದ್ಯುನ್ಮಾನ ಮಾಧ್ಯಮಗಳ ದುಷ್ಪರಿಣಾಮದಿಂದಾಗಿ ದೈನಂದಿನ ಸಾಹಿತ್ಯ ಚಟುವಟಿಕೆಗಳೆಲ್ಲ ನಿಂತು ಕುವೆಂಪು ಹೇಳಿದಂತೆ ಮನೆಗಳೆಲ್ಲ `ಸುಡುಗಾಡು’ಗಳಾಗಿವೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರವಾಚಕರಾದ ಡಾ. ಎನ್.ಎಂ. ತಳವಾರ ವಿಷಾದಿಸಿದ್ದಾರೆ.

213 ನೆಯ ಮನೆ ಮನೆ ಕವಿಗೋಷ್ಠಿ

ಆಲೂರು : ಭಾವಗಳಿಲ್ಲದೆ ಕಾವ್ಯ ಹುಟ್ಟುವುದಿಲ್ಲ, ಅಂತಹ ಭಾವಗಳು ಬದುಕಿನ ಪ್ರೀತಿಯ ಸಿಂಚನಗೊಳಿಸಬೇಕು. ಹಾಗೆಯೇ ಕಾವ್ಯ ಸಾಂಸ್ಕøತಿಕ ಪರಂಪರೆಯನ್ನು ಬಿಂಬಿಸುವಂತಿರಬೇಕು ಎಂದು ಕವಿ ಎನ್.ಎಲ್.ಚನ್ನೇಗೌಡ ಹೇಳಿದರು.

ಅವರು ಆಲೂರಿನ ವಿಜಯದುರ್ಗ ಕ್ಷೇತ್ರದಲ್ಲಿ ಸಾಹಿತಿ ಗೊರೂರು ಅನಂತರಾಜು ಪ್ರಾಯೋಜಕತ್ವದಲ್ಲಿ ನಡೆದ 213 ನೆಯ ಮನೆ ಮನೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾವ್ಯದಲ್ಲಿ ಪ್ರೀತಿ ಪದವನ್ನು ಸಂಕುಚಿತಗೊಳಿಸದೆ ವಿಶಾಲಾರ್ಥದಲ್ಲಿ ಬಳಸಬೇಕು. ಪ್ರಸ್ತುತ ಮಾನವತೆ ಮೀರಿ ಪಶುತ್ವದೆಡೆ ಸಾಗುತಿದ್ದೇವೆ ಅದರ ಬದಲಾಗಿ ಕುವೆಂಪುವಾಣಿಯಂತೆ ನಾವೆಲ್ಲರೂ ಮೊದಲು ಮಾನವರಾಗಬೇಕಿದೆ. ಇಂದಿನ ಕವಿಗೋಷ್ಠಿಯಲ್ಲಿ ಎ.ಎಸ್.ಭಾಗೀರಥಿಯವರ ‘ಅತೃಪ್ತೆ’ ಕವಿತೆಯ ‘ಅಶ್ವಥ್ಥಾಮನಿಂದ ಹತನಾದ /ಉಪಪಾಂಡವರ
 
Blogger Templates