ಹಾಸನ : ಕನ್ನಡ ಸಾಹಿತ್ಯ ಸಾಂಸ್ಕøತಿಕ ನೆಲೆಗಟ್ಟಿನಲ್ಲಿ ಇಡಿ ರಾಷ್ಟ್ರದಲ್ಲಿಯೇ ವಿಶಿಷ್ಟ್ಯ ಸ್ಥಾನಮಾನವನ್ನು ಪಡೆದಿದೆ. ಕನ್ನಡದ ಕವಿಗಳು ಹಬ್ಬ ಹರಿದಿನಗಳು, ಆಚರಣೆಗಳನ್ನು ಪ್ರಾಚೀನಕಾಲದಿಂದಲೂ ವಿಶೇಷ ದೃಷ್ಠಿಕೋನಗಳಲ್ಲಿ ನೋಡುತ್ತಾ ಬಂದಿದ್ದಾರೆ. ಅದರಲ್ಲೂ ಯುಗಾದಿಯಂತಹ ಮಹತ್ವದ ಹಬ್ಬವನ್ನು ಬೇಂದ್ರೆ, ಅಡಿಗರು, ಕೆ.ಎಸ್.ನರಸಿಂಹಸ್ವಾಮಿ, ಕುವೆಂಪು, ಬಿ.ಎಂ.ಶ್ರೀ ಸೇರಿದಂತೆ ನೂರಾರು ಕವಿಗಳು ಈ ಹಬ್ಬದ ಮಹತ್ವವನ್ನು ತಮ್ಮದೇಯಾದ ಭಾವದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಚಿಂತಕರಾದ ಶ್ರೀ ಮುಕುಂದರವರು ಅಭಿಪ್ರಾಯಪಟ್ಟರು.
ಅವರು ಹಾಸನದ ಅಗ್ರಹಾರ ಬೀದಿಯಲ್ಲಿರುವ ‘ಕಾಮದೇನು’ ನಿಲಯದಲ್ಲಿ ಕವಯಿತ್ರಿ ಸುಕನ್ಯ ಮುಕುಂದರವರ ಪ್ರಾಯೋಜಕತ್ವದಲ್ಲಿ ನಡೆದ 241 ನೆಯ ಮನೆ ಮನೆ ಕವಿಗೋಷ್ಠಿಯಲ್ಲಿ “ಕನ್ನಡ ಕಾವ್ಯದಲ್ಲಿ ಯುಗಾದಿ” ಎಂಬ ವಿಷಯದಡಿ ಉಪನ್ಯಾಸ ನೀಡಿ ಕನ್ನಡದ ಕವಿಗಳು ಯುಗಾದಿ ಕುರಿತು, ಇಲ್ಲಿನ ಮಾಮರಗಳ ಕುರಿತು, ಕೋಗಿಲೆಗಳ ಇಂಪಾದ ಗಾನದ ಕುರಿತು ಮನಮೋಹಕವಾಗಿ ತಮ್ಮ ಕವಿತೆಗಳಲ್ಲಿ ಕಟ್ಟಿಕೊಡುವುದರ ಮೂಲಕ ಕನ್ನಡ ನಾಡಿನ ಶ್ರೇಷ್ಠತೆಯನ್ನು ಬಿಂಬಿಸುತ್ತಾ ಮಾನವೀಯ ಮೌಲ್ಯಗಳನ್ನು ಪಲ್ಲವಿಸಿದ್ದಾರೆ ಎಂದರು.
: ಚರ್ಚೆ :
ಉಪನ್ಯಾಸದ ಮೇಲೆ ನಡೆದ ಚರ್ಚೆಯಲ್ಲಿ ಹಿರಿಯ ಪತ್ರಕರ್ತೆಯಾದ ಲೀಲಾವತಿ, ಕೊಟ್ರೇಶ್ ಎಸ್.ಉಪ್ಪಾರ್, ಕೆ.ಟಿ.ಜಯಶ್ರೀ, ರಾಜೇಶ್ವರಿ ಹುಲ್ಲೇನಹಳ್ಳಿ, ಜಯದೇವಪ್ಪ, ಡಾ.ಕೆ.ಕೆ.ಜಯಚಂದ್ರಗುಪ್ತ, ಜಯಶಂಕರ್ ಬೆಳಗುಂಬ, ಶ್ರೀವಿಜಯ ಹಾಸನ, ಗಿರಿಜಾದಿನಾಕರ್, ರಘು, ಲಲಿತ ಮುಂತಾದವರು ಭಾಗವಹಿಸಿದ್ದರು.
: ಬೇಂದ್ರೆ ಕಾವ್ಯೋತ್ಸವ :
ಸಂಚಾಲಕರಾದ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿ ಮನೆ ಮನೆ ಕವಿಗೋಷ್ಠಿಯು ಸಾಹಿತ್ಯ ಸಹೃದಯರ ಹಾಗೂ ಮಾಧ್ಯಮದ ಸಹಕಾರದಿಂದ ಮಹತ್ವದ ಕೆಲಸವನ್ನು ಮಾಡುತ್ತಾ ಬಂದಿದೆ. ಈ ದಿಸೆಯಲ್ಲಿ ಮೆ 07 ರಂದು ಸಾಹಿತಿ ಡಾ||ಕೆ.ಕೆ.ಜಯಚಂದ್ರಗುಪ್ತರವರ ಪ್ರಯೋಜಕತ್ವದಲ್ಲಿ ನಡೆಯಲಿರುವ 242 ನೆಯ ಮನೆ ಮನೆ ಕವಿಗೋಷ್ಠಿ ಸಂದರ್ಭದಲ್ಲಿ “ಬೇಂದ್ರೆ ಕಾವ್ಯೋತ್ಸವ”ವನ್ನು ಹಮ್ಮಿಕೊಂಡಿದೆ. ಧಾರವಾಡದ ಬೇಂದ್ರೆ ಪ್ರತಿಷ್ಠಾನದ ಜಿ.ಕೃಷ್ಣಪ್ಪನವರು ವಿಶೇಷ ಉಪನ್ಯಾಸ ನೀಡುವರು. ಮುಂದಿನ ತಿಂಗಳು ಎಲ್ಲ ಕವಿಗಳು ವಾಚನ ಮಾಡುವ ಕವಿತೆಗಳು ಬೇಂದ್ರೆ ಜೀವನ, ಸಾಹಿತ್ಯ, ಅವರ ಮೌಲ್ಯಗಳನ್ನು ಬಿಂಬಿಸುವಂತಿರಬೇಕು ಹಾಗೆಯೇ ಮನೆ ಮನೆ ಕವಿಗೋಷ್ಠಿ ಗಾಯಕರೇ ಬೇಂದ್ರೆಯವರ ಭಾವಗೀತೆಗಳನ್ನು ಹಾಡಲು ಅವಕಾಶ ನೀಡಲಾಗಿದೆ. ಈ ಸಂದರ್ಭವನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳ ಬೇಕಿದೆ ಎಂದರು.
: ಕವಿಗೋಷ್ಠಿ :
ನಂತರ ನಡೆದ ಕವಿಗೋಷ್ಠಿಯಲ್ಲಿ ಕಲಾವತಿ ಮಧುಸೂದನ್, ಹೆಚ್.ಬಿ.ಚೂಡಾಮಣಿ, ದ್ಯಾವನೂರು ಮಂಜುನಾಥ, ಎನ್.ಎಲ್.ಚನ್ನೇಗೌಡ, ಸಮುದ್ರವಳ್ಳಿ ವಾಸು, ಪಲ್ಲವಿ ಬೇಲೂರು, ರಾಜೇಶ್ವರಿ ಹುಲ್ಲೇನಹಳ್ಳಿ, ರಾಜೇಶ್ ಹೆಚ್.ಆರ್, ಶ್ರೀವಿಜಯ ಹಾಸನ, ಗಿರಿಜಾದಿನಕರ್ ವೈ, ಅಶ್ವಿನಿ ಪಿ, ಬಸವರಾಜ್ ಹೆಚ್.ಎಸ್, ಲಲಿತ ಎಸ್, ಬಿ.ಎಸ್.ವನಜಾಕ್ಷಿ ದುದ್ದ, ಡಾ||ಕೆ.ಕೆ.ಜಯಚಂದ್ರಗುಪ್ತ, ಜಯಶಂಕರ್ ಬೆಳಗುಂಬ, ಸುಕನ್ಯ ಮುಕುಂದ, ಶಾಂತ ಅತ್ನಿ, ಎಂ.ಶಿವಣ್ಣ, ಸರೋಜ ಟಿ.ಎಂ, ಬಿ.ವೇದಾವತಿ, ಧನುಷ್ ಎಂ.ಹೊಸೂರು, ನಾಗರಾಜ್ ದೊಡ್ಡಮನಿ, ವಾಣಿಮಹೇಶ್, ಸುಧಾಮಣಿ, ಹೆಚ್.ವೇದಶ್ರೀರಾಜ್, ಗಂಗಾಧರ, ಪರಮೇಶ್ ಮಡಬಲು, ಪದ್ಮಾವತಿ ವೆಂಕಟೇಶ್, ಶಿವಾಗ್ನಿರಾಜ್, ಕೊಟ್ರೇಶ್ ಎಸ್.ಉಪ್ಪಾರ್ ಮುಂತಾದ 35 ಕ್ಕೂ ಹೆಚ್ಚಿನ ಕವಿಗಳಿಂದ ಕಾವ್ಯ ವಾಚನ ಹಾಗೂ ವಿಮರ್ಶೆಗಳು ನಡೆದವು.
: ಉಪಸ್ಥಿತಿ :
ಕಾರ್ಯಕ್ರಮದಲ್ಲಿ ಲೀಲಾವತಿ, ಜಯದೇವಪ್ಪ, ಕೆ.ಟಿ.ಜಯಶ್ರೀ, ಮಹೇಶ್ ಮುಂತಾದವರು ಉಪಸ್ಥಿತರಿದ್ದರು.
: ನಿರ್ವಹಣೆ :
ಸಂಚಾಲಕರಾದ ಕೊಟ್ರೇಶ್ ಎಸ್.ಉಪ್ಪಾರ್ ಸ್ವಾಗತಿಸಿ, ನಿರೂಪಿಸಿದರು. ಕಲಾವತಿ ಮಧುಸೂದನ್ ಪ್ರಾರ್ಥಿಸಿದರು, ಸುಕನ್ಯ ಮುಕುಂದರವರು ವಂದಿಸಿದರು.



0 comments:
Post a Comment