ಆಲೂರು : ಭಾವಗಳಿಲ್ಲದೆ ಕಾವ್ಯ ಹುಟ್ಟುವುದಿಲ್ಲ, ಅಂತಹ ಭಾವಗಳು ಬದುಕಿನ ಪ್ರೀತಿಯ ಸಿಂಚನಗೊಳಿಸಬೇಕು. ಹಾಗೆಯೇ ಕಾವ್ಯ ಸಾಂಸ್ಕøತಿಕ ಪರಂಪರೆಯನ್ನು ಬಿಂಬಿಸುವಂತಿರಬೇಕು ಎಂದು ಕವಿ ಎನ್.ಎಲ್.ಚನ್ನೇಗೌಡ ಹೇಳಿದರು.

ಅವರು ಆಲೂರಿನ ವಿಜಯದುರ್ಗ ಕ್ಷೇತ್ರದಲ್ಲಿ ಸಾಹಿತಿ ಗೊರೂರು ಅನಂತರಾಜು ಪ್ರಾಯೋಜಕತ್ವದಲ್ಲಿ ನಡೆದ 213 ನೆಯ ಮನೆ ಮನೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾವ್ಯದಲ್ಲಿ ಪ್ರೀತಿ ಪದವನ್ನು ಸಂಕುಚಿತಗೊಳಿಸದೆ ವಿಶಾಲಾರ್ಥದಲ್ಲಿ ಬಳಸಬೇಕು. ಪ್ರಸ್ತುತ ಮಾನವತೆ ಮೀರಿ ಪಶುತ್ವದೆಡೆ ಸಾಗುತಿದ್ದೇವೆ ಅದರ ಬದಲಾಗಿ ಕುವೆಂಪುವಾಣಿಯಂತೆ ನಾವೆಲ್ಲರೂ ಮೊದಲು ಮಾನವರಾಗಬೇಕಿದೆ. ಇಂದಿನ ಕವಿಗೋಷ್ಠಿಯಲ್ಲಿ ಎ.ಎಸ್.ಭಾಗೀರಥಿಯವರ ‘ಅತೃಪ್ತೆ’ ಕವಿತೆಯ ‘ಅಶ್ವಥ್ಥಾಮನಿಂದ ಹತನಾದ /ಉಪಪಾಂಡವರ
ರುಂಡದಿಂದ/ ಬೇರ್ಪಟ್ಟ ಮುಂಡದಲಿ/ಕೈಯಾಡಿಸುವಾಗ ಮನದಲ್ಲಿ/ಪ್ರಶ್ನೆಯೊಂದು ಎದ್ದಿತು/ಪಾಂಚಾಲಿಗೆ ತೃಪ್ತಿಯಾಯಿತೇ? ಸಾಲುಗಳು ಹಾಗೂ ಕೊಟ್ರೇಶ್ ಉಪ್ಪಾರರ ‘ನನ್ನಜ್ಜ’ ಕವಿತೆಯ ‘ ನನ್ನಜ್ಜ ದಾಪುಗಾಲಿಡುತ್ತದ್ದರೆ/ ಒಂದು ಪರಂಪರೆಯ ಅಂತಿಮ ಯಾತ್ರೆ/ ನನ್ನೂರ ರಥದ ಕಳಸದ ವಯ್ಯಾರ/ ಕೋಲ್ಮಿಂಚ ನಾಚಿಸುವ ನಯನದ್ಹೊಳಪು/ ..... ರತ್ನಗಂಬಳಿ ನಾಚಿಸುವ ನನ್ನಜ್ಜನ ಸೆಲ್ಲೇವು/ ಅದೆಷ್ಟೋ ಭಾವುಕತೆಗಳು ಸುಪ್ತಗೊಂಡು ತವಕಿಸುತ್ತಿದ್ದವು.’ಎಂಬ ಸಾಲುಗಳು ಗತದ ಸಂಸ್ಕøತಿಯನ್ನು ನೆನಪಿಸಿತು. ಎಂ.ಜಿ ಪರಮೇಶ್ ಅವರ ‘ಯಾರಿಗೆ ಬಂತು ಸ್ವಾತಂತ್ರ್ಯ? ಎಂಬ ಕವಿತೆಯು ಸಿದ್ದಲಿಂಗಯ್ಯನವರ ಭಾವವನ್ನು ನೆನಪಿಗೆ ತಂದಿತು. ಕೆ.ಬಿ.ಗುರುಮೂರ್ತಿಯವರ ‘ಗೋವಿನ ನೋವು’, ಕೆ.ಆರ್.ಶಂಕರಮ್ಮ, ನವಾಬ್ ಬೇಲೂರು , ಚಿನ್ನೇನಹಳ್ಳಿ ಸ್ವಾಮಿ, ಸಮುದ್ರವಳ್ಳಿ ವಾಸು ಹಾಗೂ ಡಾ|| ಜಯಚಂದ್ರ ಗುಪ್ತ ಅವರ ಚುಟುಕುಗಳು ಗಮನ ಸೆಳೆದವು. ಎಸ್.ಎಂ.ದೇವರಾಜೇಗೌಡರ ‘ತಾಯಿಯೆಂಬುದೇ ಸತ್ಯ’ ಕವಿತೆಯ ‘ಸತ್ಯ ಮಿತ್ಯ ವಾಸ್ತವ/ಅವಾಸ್ತವದ ಪಡಿನೆರಳು/ ಪ್ರಕೃತಿ, ಪ್ರಕೃತಿಯೊಳಗಿನ/ ಗಿಡ,ಮರ,ಹೂ,ಪ್ರಾಣಿ,ಪಕ್ಷಿ,ಮಾನವ/ ಸಕಲ ಜೀವ ಜಂತುಗಳು/ ಜಂಗಮ ಜಗತ್ತಿನ/ ವಾಸ್ತವತೆಯ ಪ್ರತಿಬಿಂಬಗಳು’ ಸಾಲುಗಳು ತಾಯಿಯೆಂಬುದೇ ಸತ್ಯ ಉಳಿದೆಲ್ಲವೂ ಮಿಥ್ಯ ಎಂಬುದಕ್ಕೆ ಸಾಕ್ಷಿಯಾಯಿತು. ಪವನ್ ಆಲೂರು ಅವರ ‘ಮರ್ಮ’ ಕವಿತೆಯ ‘ಕಾಮಾದಿ ಬಯಕೆಯ ಈ ದೇಹ/ ಸಮಾಧಿ ಸಮಯದಿ ಕುಗ್ಗದು ದಾಹ/ ಮೈ ಮುಚ್ಚಳ ಬಟ್ಟೆ ತೊಗಲಿಗೆ/ ಬೆತ್ತಲ ಅಸ್ಥಿಪಂಜರಕೆ ಏಕೆ ವಸ್ತ್ರ?’ ಸಾಲುಗಳು ಆಳವಾದ ಚಿಂತನೆಗೆ ಹಚ್ಚುತ್ತವೆ. ದ್ಯಾವನೂರು ಮಂಜುನಾಥ ಹಾಗೂ ಡಾ|| ನಾಗೇಶ್ ಅವರ ಧ್ವನಿ ಮುದ್ರಿತ ಮೊಬೈಲ್ ಕವಿತೆಗಳು, ಕಲಾವತಿಮಧುಸೂದನವರ ‘ಭಾವದ ಕಡಲು ಕಾವ್ಯದ ಒಡಲು’, ಎಸ್.ಆರ್.ವಿನಯ್ ಅವರ ‘ದಿಕ್ಕಾರ’, ಚಲಂ ಹಾಡ್ಲಹಳ್ಳಿ ಅವರ ‘ಚಿಲ್ಲರೆ ಕಾಸಿನ ಕನಸು’, ಆರ್.ವೆಂಕಟೇಶ್ ಅವರ ‘ಮಾಗಿಕಾಲ’, ಸುರೇಶ್ ಗುರೂಜಿಯವರ ‘ಮಾನವರಾಗೋಣ’, ಗೊರೂರು ಅನಂತರಾಜುರವರ ಗೊರೂರು ಹಾಗೂ ಹೇಮಾವತಿ ಕುರಿತ ಕವಿತೆ ಮತ್ತು ಗಿರಿಜಮ್ಮ ಅವರ ‘ಶಿಶುಗೀತೆ’, ಹಾಗೆಯೇ ಎಚ್.ಡಿ.ಪ್ರದೀಪ್ ಅವರ ಬರಿದಾಗಿದೆ ಕವಿತೆಯ ಭಾವಗಳು ಉತ್ತಮವಾಗಿದ್ದವು ಎಂದರು.
ಖ್ಯಾತ ವಿಚಾರವಾದಿಗಳಾದ ಜ.ಹೊ.ನಾರಾಯಣಸ್ವಾಮಿಯವರು ‘ಪಾತಾಳದಾಳದಲಿ ಪಾದವನೂರಿ/ ಭೂಮಿ ಉದ್ದಕೆದ್ದು ಬೆಳೆದು/ ಬಾನೆತ್ತರಕೆ ಕೈ ಚಾಚಿ/ ಕಣ್ತೆರೆದು ಮೊಗವೆತ್ತು ನೋಡಿದೆ/ ಮೂಲೋಕವನು ಬೆಸೆದು ಕೂಡಿದೆ/ ಗ್ರಹ ತಾರೆಗಳೊಡನೆ ಮಾತಾಡಿದೆ/ ಬಾಯ್ತುಂಬ ಹಾಡಿದೆ……...’ ಎಂಬ ತಮ್ಮದೇಯಾದ ‘ಓಂ’ ಕವಿತೆ ವಾಚಿಸುದರ ಮೂಲಕ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ ಕಾವ್ಯ ಮಾನವೀಯ ನೆಲೆಯಲ್ಲಿ ಬದುಕನ್ನು ಕಟ್ಟಿಕೊಡಬೇಕು. ಪ್ರಾಕೃತಿಕ ಧೀಶಕ್ತಿಯನ್ನು ಬಿಂಬಿಸಿ, ಆಧ್ಯಾತ್ಮಿಕ ಚಿತ್ತದೆಡೆ ಗಮನಹರಿಸುವಂತಿರಬೇಕು ಎಂದರು.
ಇತ್ತೀಚೆಗೆ ಡಾ|| ಗೊರೂರು ರಾಮಸ್ವಾಮಿ ಪ್ರಶಸ್ತಿ ಪಡೆದ ಜ.ಹೊ.ನಾ ರವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕರಾದ ಕೆ.ಆರ್.ರಮೇಶ್, ಶಿಕ್ಷಕಿ ಎಚ್.ಎಸ್.ದೇವಿರಮ್ಮ ಮುಂತಾದವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಚೇತನ ಬಳಗದ ಗೌರವಾಧ್ಯಕ್ಷರಾದ ಎಂ.ಪಿ.ಹರೀಶ್, ಪ್ರಧಾನ ಕಾರ್ಯದರ್ಶಿಯಾದ ಸಿ.ಎಸ್.ಅಣ್ಣಪ್ಪ, ಆಲೂರು ಗ್ರಂಥಾಲಯ ಅಧಿಕಾರಿಗಳಾದ ಟಿ.ಕೆ.ನಾಗರಾಜು, ಹರೀಶ್, ಭಾಗ್ಯ, ಪ್ರವೀಣ್, ಸಿ.ಎಂ.ಶ್ರೀನಿವಾಸ , ಎಂ.ಆರ್.ಕುಮುದ ಮುಂತಾದವರು ಉಪಸ್ಥಿತರಿದ್ದರು.
ಸಂಚಾಲಕರಾದ ಕೊಟ್ರೇಶ್ ಎಸ್.ಉಪ್ಪಾರ್ ಸ್ವಾಗತಿಸಿ, ನಿರೂಪಿಸಿದರು, ಪ್ರಾಯೋಜಕರಾದ ಗೊರೂರು ಅನಂತರಾಜು ವಂದಿಸಿದರು.

ಅವರು ಆಲೂರಿನ ವಿಜಯದುರ್ಗ ಕ್ಷೇತ್ರದಲ್ಲಿ ಸಾಹಿತಿ ಗೊರೂರು ಅನಂತರಾಜು ಪ್ರಾಯೋಜಕತ್ವದಲ್ಲಿ ನಡೆದ 213 ನೆಯ ಮನೆ ಮನೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾವ್ಯದಲ್ಲಿ ಪ್ರೀತಿ ಪದವನ್ನು ಸಂಕುಚಿತಗೊಳಿಸದೆ ವಿಶಾಲಾರ್ಥದಲ್ಲಿ ಬಳಸಬೇಕು. ಪ್ರಸ್ತುತ ಮಾನವತೆ ಮೀರಿ ಪಶುತ್ವದೆಡೆ ಸಾಗುತಿದ್ದೇವೆ ಅದರ ಬದಲಾಗಿ ಕುವೆಂಪುವಾಣಿಯಂತೆ ನಾವೆಲ್ಲರೂ ಮೊದಲು ಮಾನವರಾಗಬೇಕಿದೆ. ಇಂದಿನ ಕವಿಗೋಷ್ಠಿಯಲ್ಲಿ ಎ.ಎಸ್.ಭಾಗೀರಥಿಯವರ ‘ಅತೃಪ್ತೆ’ ಕವಿತೆಯ ‘ಅಶ್ವಥ್ಥಾಮನಿಂದ ಹತನಾದ /ಉಪಪಾಂಡವರ ರುಂಡದಿಂದ/ ಬೇರ್ಪಟ್ಟ ಮುಂಡದಲಿ/ಕೈಯಾಡಿಸುವಾಗ ಮನದಲ್ಲಿ/ಪ್ರಶ್ನೆಯೊಂದು ಎದ್ದಿತು/ಪಾಂಚಾಲಿಗೆ ತೃಪ್ತಿಯಾಯಿತೇ? ಸಾಲುಗಳು ಹಾಗೂ ಕೊಟ್ರೇಶ್ ಉಪ್ಪಾರರ ‘ನನ್ನಜ್ಜ’ ಕವಿತೆಯ ‘ ನನ್ನಜ್ಜ ದಾಪುಗಾಲಿಡುತ್ತದ್ದರೆ/ ಒಂದು ಪರಂಪರೆಯ ಅಂತಿಮ ಯಾತ್ರೆ/ ನನ್ನೂರ ರಥದ ಕಳಸದ ವಯ್ಯಾರ/ ಕೋಲ್ಮಿಂಚ ನಾಚಿಸುವ ನಯನದ್ಹೊಳಪು/ ..... ರತ್ನಗಂಬಳಿ ನಾಚಿಸುವ ನನ್ನಜ್ಜನ ಸೆಲ್ಲೇವು/ ಅದೆಷ್ಟೋ ಭಾವುಕತೆಗಳು ಸುಪ್ತಗೊಂಡು ತವಕಿಸುತ್ತಿದ್ದವು.’ಎಂಬ ಸಾಲುಗಳು ಗತದ ಸಂಸ್ಕøತಿಯನ್ನು ನೆನಪಿಸಿತು. ಎಂ.ಜಿ ಪರಮೇಶ್ ಅವರ ‘ಯಾರಿಗೆ ಬಂತು ಸ್ವಾತಂತ್ರ್ಯ? ಎಂಬ ಕವಿತೆಯು ಸಿದ್ದಲಿಂಗಯ್ಯನವರ ಭಾವವನ್ನು ನೆನಪಿಗೆ ತಂದಿತು. ಕೆ.ಬಿ.ಗುರುಮೂರ್ತಿಯವರ ‘ಗೋವಿನ ನೋವು’, ಕೆ.ಆರ್.ಶಂಕರಮ್ಮ, ನವಾಬ್ ಬೇಲೂರು , ಚಿನ್ನೇನಹಳ್ಳಿ ಸ್ವಾಮಿ, ಸಮುದ್ರವಳ್ಳಿ ವಾಸು ಹಾಗೂ ಡಾ|| ಜಯಚಂದ್ರ ಗುಪ್ತ ಅವರ ಚುಟುಕುಗಳು ಗಮನ ಸೆಳೆದವು. ಎಸ್.ಎಂ.ದೇವರಾಜೇಗೌಡರ ‘ತಾಯಿಯೆಂಬುದೇ ಸತ್ಯ’ ಕವಿತೆಯ ‘ಸತ್ಯ ಮಿತ್ಯ ವಾಸ್ತವ/ಅವಾಸ್ತವದ ಪಡಿನೆರಳು/ ಪ್ರಕೃತಿ, ಪ್ರಕೃತಿಯೊಳಗಿನ/ ಗಿಡ,ಮರ,ಹೂ,ಪ್ರಾಣಿ,ಪಕ್ಷಿ,ಮಾನವ/ ಸಕಲ ಜೀವ ಜಂತುಗಳು/ ಜಂಗಮ ಜಗತ್ತಿನ/ ವಾಸ್ತವತೆಯ ಪ್ರತಿಬಿಂಬಗಳು’ ಸಾಲುಗಳು ತಾಯಿಯೆಂಬುದೇ ಸತ್ಯ ಉಳಿದೆಲ್ಲವೂ ಮಿಥ್ಯ ಎಂಬುದಕ್ಕೆ ಸಾಕ್ಷಿಯಾಯಿತು. ಪವನ್ ಆಲೂರು ಅವರ ‘ಮರ್ಮ’ ಕವಿತೆಯ ‘ಕಾಮಾದಿ ಬಯಕೆಯ ಈ ದೇಹ/ ಸಮಾಧಿ ಸಮಯದಿ ಕುಗ್ಗದು ದಾಹ/ ಮೈ ಮುಚ್ಚಳ ಬಟ್ಟೆ ತೊಗಲಿಗೆ/ ಬೆತ್ತಲ ಅಸ್ಥಿಪಂಜರಕೆ ಏಕೆ ವಸ್ತ್ರ?’ ಸಾಲುಗಳು ಆಳವಾದ ಚಿಂತನೆಗೆ ಹಚ್ಚುತ್ತವೆ. ದ್ಯಾವನೂರು ಮಂಜುನಾಥ ಹಾಗೂ ಡಾ|| ನಾಗೇಶ್ ಅವರ ಧ್ವನಿ ಮುದ್ರಿತ ಮೊಬೈಲ್ ಕವಿತೆಗಳು, ಕಲಾವತಿಮಧುಸೂದನವರ ‘ಭಾವದ ಕಡಲು ಕಾವ್ಯದ ಒಡಲು’, ಎಸ್.ಆರ್.ವಿನಯ್ ಅವರ ‘ದಿಕ್ಕಾರ’, ಚಲಂ ಹಾಡ್ಲಹಳ್ಳಿ ಅವರ ‘ಚಿಲ್ಲರೆ ಕಾಸಿನ ಕನಸು’, ಆರ್.ವೆಂಕಟೇಶ್ ಅವರ ‘ಮಾಗಿಕಾಲ’, ಸುರೇಶ್ ಗುರೂಜಿಯವರ ‘ಮಾನವರಾಗೋಣ’, ಗೊರೂರು ಅನಂತರಾಜುರವರ ಗೊರೂರು ಹಾಗೂ ಹೇಮಾವತಿ ಕುರಿತ ಕವಿತೆ ಮತ್ತು ಗಿರಿಜಮ್ಮ ಅವರ ‘ಶಿಶುಗೀತೆ’, ಹಾಗೆಯೇ ಎಚ್.ಡಿ.ಪ್ರದೀಪ್ ಅವರ ಬರಿದಾಗಿದೆ ಕವಿತೆಯ ಭಾವಗಳು ಉತ್ತಮವಾಗಿದ್ದವು ಎಂದರು.
ಖ್ಯಾತ ವಿಚಾರವಾದಿಗಳಾದ ಜ.ಹೊ.ನಾರಾಯಣಸ್ವಾಮಿಯವರು ‘ಪಾತಾಳದಾಳದಲಿ ಪಾದವನೂರಿ/ ಭೂಮಿ ಉದ್ದಕೆದ್ದು ಬೆಳೆದು/ ಬಾನೆತ್ತರಕೆ ಕೈ ಚಾಚಿ/ ಕಣ್ತೆರೆದು ಮೊಗವೆತ್ತು ನೋಡಿದೆ/ ಮೂಲೋಕವನು ಬೆಸೆದು ಕೂಡಿದೆ/ ಗ್ರಹ ತಾರೆಗಳೊಡನೆ ಮಾತಾಡಿದೆ/ ಬಾಯ್ತುಂಬ ಹಾಡಿದೆ……...’ ಎಂಬ ತಮ್ಮದೇಯಾದ ‘ಓಂ’ ಕವಿತೆ ವಾಚಿಸುದರ ಮೂಲಕ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ ಕಾವ್ಯ ಮಾನವೀಯ ನೆಲೆಯಲ್ಲಿ ಬದುಕನ್ನು ಕಟ್ಟಿಕೊಡಬೇಕು. ಪ್ರಾಕೃತಿಕ ಧೀಶಕ್ತಿಯನ್ನು ಬಿಂಬಿಸಿ, ಆಧ್ಯಾತ್ಮಿಕ ಚಿತ್ತದೆಡೆ ಗಮನಹರಿಸುವಂತಿರಬೇಕು ಎಂದರು.
ಇತ್ತೀಚೆಗೆ ಡಾ|| ಗೊರೂರು ರಾಮಸ್ವಾಮಿ ಪ್ರಶಸ್ತಿ ಪಡೆದ ಜ.ಹೊ.ನಾ ರವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕರಾದ ಕೆ.ಆರ್.ರಮೇಶ್, ಶಿಕ್ಷಕಿ ಎಚ್.ಎಸ್.ದೇವಿರಮ್ಮ ಮುಂತಾದವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಚೇತನ ಬಳಗದ ಗೌರವಾಧ್ಯಕ್ಷರಾದ ಎಂ.ಪಿ.ಹರೀಶ್, ಪ್ರಧಾನ ಕಾರ್ಯದರ್ಶಿಯಾದ ಸಿ.ಎಸ್.ಅಣ್ಣಪ್ಪ, ಆಲೂರು ಗ್ರಂಥಾಲಯ ಅಧಿಕಾರಿಗಳಾದ ಟಿ.ಕೆ.ನಾಗರಾಜು, ಹರೀಶ್, ಭಾಗ್ಯ, ಪ್ರವೀಣ್, ಸಿ.ಎಂ.ಶ್ರೀನಿವಾಸ , ಎಂ.ಆರ್.ಕುಮುದ ಮುಂತಾದವರು ಉಪಸ್ಥಿತರಿದ್ದರು.
ಸಂಚಾಲಕರಾದ ಕೊಟ್ರೇಶ್ ಎಸ್.ಉಪ್ಪಾರ್ ಸ್ವಾಗತಿಸಿ, ನಿರೂಪಿಸಿದರು, ಪ್ರಾಯೋಜಕರಾದ ಗೊರೂರು ಅನಂತರಾಜು ವಂದಿಸಿದರು.

0 comments:
Post a Comment