Subscribe:

Ads 468x60px

ಇಲ್ಲಿ ಯಾರು ಮುಖ್ಯರಲ್ಲ, ಇಲ್ಲಿ ಯಾರು ಅಮುಖ್ಯರಲ್ಲ.

222 ನೆಯ ಮನೆಮನೆ ಕವಿಗೋಷ್ಠಿ

 ಕಾವ್ಯದ ಅಭಿವ್ಯಕ್ತಿ ಒಂದು ಸುಂದರ ಅಭಿವ್ಯಕ್ತಿ, ಅದು ಸಹಜ ಮಾತಿಗಿಂತ ಭಿನ್ನವಾಗಿರುತ್ತದೆ. ಕಾವ್ಯ ಭಾಷೆ, ಅಲಂಕಾರಿಕ ಭಾಷೆಯಾಗಿರಬೇಕು, ಸಂಕೇತ, ಪ್ರತಿಮೆ, ಉಪಮೆಗಳಿಂದ ಒಡಗೂಡಿದ ಭಾಷೆ ಹಸಿಗೋಡೆಗೆ ಹರಳು ಹೊಡೆದಂತೆ ಅರ್ಥಸ್ಪುಟತೆಯನ್ನು ನೀಡುತ್ತದೆ ಎಂದು ಸಾಹಿತಿ ಚಂದ್ರಕಾಂತ ಪಡೆಸೂರ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ 222 ನೆಯ ಮನೆಮನೆ
ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕವಿಯಾದವನು ಪ್ರಕೃತಿಯೊಂದಿಗೆ ಮಾತನಾಡಬೇಕು.
ಅದರ ಬದುಕಿನ ಒಳ ಹೊಕ್ಕು ಅದರ ಅಂದ ಚೆಂದವನ್ನು ಬೆರಗುಗಳಿಗೆ, ತಲ್ಲಣಗಳಿಗೆ ಧ್ವನಿಯಾಗಬೇಕು, ಅಂದಾಗ ಮಾತ್ರ ಅಭಿವ್ಯಕ್ತಿ ಕಾವ್ಯಾಭಿವ್ಯಕ್ತಿಯಾಗುತ್ತದೆ. ಇಂದು ನಡೆದ ಈ ಕವಿಗೋಷ್ಠಿಯಲ್ಲಿ ಸುಮಾರು 32 ಕವಿಗಳು ತಮ್ಮ ಕವಿತೆ ವಾಚಿಸಿದರು. ಅವುಗಳಲ್ಲಿ ಮಾನವೀಯತೆ, ಸಂಸ್ಕøತಿ, ಪ್ರಸ್ತುತ ಭ್ರಷ್ಟಾಚಾರ, ಪರಿಸರ ಕಾಳಜಿ, ಸಾಮಾಜಿಕ ವಿಡಂಬನೆ, ಕನಸಿಗಾರಿಕೆ, ತಾರತಮ್ಯ, ಇರುಳು ಬೆಳಕಿನಾಟ, ಆಧುನಿಕ ತಂತ್ರಜ್ಞಾನ, ಶಿಕ್ಷಣದ ವ್ಯವಸ್ಥೆ, ಶಿಕ್ಷಕ, ಆಧ್ಯಾತ್ಮ ಹೀಗೆ ಹಲವಾರು ವಿಷಯಗಳು ಪಲ್ಲವಿಸಿವೆ. ಪದ ಲಾಲಿತ್ಯ ಕಾವ್ಯದ ಮೊದಲ ಗುಣ ನಾನು ಮನೆಗೆ ಬರುತ್ತೇನೆ ಎಂಬುದು ಕಾವ್ಯವಾಗುತ್ತದೆ. ಶಿವ ಕಾಣದೆ ಕವಿ ಕುರುಡನೋ ಶಿವ ಕಾವ್ಯದ ಕಣ್ಣೋ ಎಂದು ಕುವೆಂಪು ಹೇಳುವ ಹಾಗೆ ಶಿವತತ್ತ್ವ ಅಂದರೆ ಶಾಂತಿ, ಪ್ರೀತಿ, ಸಹಬಾಳ್ವೆಯನ್ನು ಪ್ರತಿಪಾದಿಸುವುದು ಕಾವ್ಯದ ಧೋರಣೆಯಾಗಬೇಕು ಎಂದರು.
ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ|| ಕೆ.ಕೆ.ಜಯಚಂದ್ರಗುಪ್ತ ಉದ್ಘಾಟನೆ ಮಾಡಿ ಮಾತನಾಡಿ ಸಾಹಿತ್ಯವನ್ನು ಪಸರಿಸುವುದೇ ಮನೆ ಮನೆ ಕವಿಗೋಷ್ಠಿಯ ಉದ್ದೇಶವಾಗಿದ್ದು, ಅದರ ಜೊತೆ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಸಾಹಿತ್ಯ ಪೋಷಿಸಿ, ಬೆಳೆಸುವ ಕೈಂಕೈರ್ಯದಲ್ಲಿ ತೊಡಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಎನ್.ಎಲ್.ಚನ್ನೇಗೌಡ, ಸುಶೀಲಾ ಸೋಮಶೇಖರ್, ಜಯದೇವಪ್ಪ, ಶ್ರೀವಿಜಯ ಹಾಸನ, ಕೆ.ಟಿ.ಜಯಶ್ರೀ, ನವಾಬ್ ಬೇಲೂರ್ ಮಾತನಾಡಿದರು.
 ಕವಿಗೋಷ್ಠಿಯಲ್ಲಿ ಜಯಣ್ಣ, ಬಿ.ವೇದಾವತಿ, ಪದ್ಮಾವತಿ ವೆಂಕಟೇಶ್, ಚೂಡಾಮಣಿ, ರಾಮಕೃಷ್ಣ, ಪುಟ್ಟಸ್ವಾಮಿ, ಜಯಂತಿ ಚಂದ್ರಶೇಖರ್, ಶೃತಿ, ನೀಲಾವತಿ, ಕುಮುದ, ಲಲಿತ, ಸುರೇಶ್ ಗುರೂಜಿ, ಕಾಂತರಾಜ್, ವಾಸು ಸಮುದ್ರವಳ್ಳಿ, ಬೆಳಗುಲಿ ಕೆಂಪಯ್ಯ, ಕುಮಾರ್, ವಿನಯ್, ಸಂದೀಪ್, ಪರಮೇಶ, ಗಿರಿಜಮ್ಮ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಕವಿಗಳು ಕವಿತೆ ವಾಚನ ಮಾಡಿದರು.
ಸಂಚಾಲಕರಾದ ಕೊಟ್ರೇಶ್ ಎಸ್.ಉಪ್ಪಾರ್ ಕಾರ್ಯಕ್ರಮ ನಿರ್ವಹಿಸಿದರು, ಸುರೇಶ್ ಗುರೂಜಿ ಸ್ವಾಗತಿಸಿದರು, ವಾಸು ಸಮುದ್ರವಳ್ಳಿ ವಂದಿಸಿದರು.

0 comments:

Post a Comment

 
Blogger Templates