ಹಾಸನ, ನವೆಂಬರ್ 10. ಕನ್ನಡ ನಾಡು ನುಡಿ, ಸಾಹಿತ್ಯ, ಭಾಷೆಗಳಿಗೆ ಎರಡು ಸಾವಿರ ವರ್ಷಗಳಷ್ಟು ಪ್ರಾಚೀನ ಇತಿಹಾಸವಿದೆ ಎಂದು ಎ.ವಿ.ಕೆ. ಕಾಲೇಜಿನ ಪ್ರಾಧ್ಯಾಪಕ, ಸಾಹಿತಿ ಡಾ!! ಯತೀಶ್ವರ್‍ರವರು ಅಭಿಪ್ರಾಯಪಟ್ಟರು. ಅವರು ಇಂದು ನಗರದ ರಂಗೋಲಿಹಳ್ಳದಲ್ಲಿರುವ ಸುರೇಶ್ ಗುರೂಜಿ ಅವರ ಧ್ಯಾನ ಮತ್ತು ವ್ಯಕ್ತಿತ್ವ ವಿಕಾಸ ಕೇಂದ್ರದಲ್ಲಿ ನಡೆದ ಮನೆ-ಮನೆ ಕವಿಗೋಷ್ಠಿಯ 200ನೇ ಮಾಸಿಕ ಕಾರ್ಯಕ್ರಮದಲ್ಲಿ "ಕನ್ನಡ ಕಾವ್ಯದಲ್ಲಿ ನಾಡು-ನುಡಿ ಎಂಬ ವಿಷಯವನ್ನು ಕುರಿತು ಮಾತನಾಡುತ್ತಿದ್ದರು.
ಉಪನ್ಯಾಸದ ವಿಷಯವೇ ಅಭಿವ್ಯಕ್ತಿಗೆ ವಿಪುಲವಾಗಿದೆ. ವರ್ತಮಾನದಲ್ಲಿ ನಾಡು-ನುಡಿಯ ಬಗ್ಗೆ ತಾಳುಮ ನಿರ್ಧಾರವೇ ಮುಖ್ಯವಾಗಿರುತ್ತದೆ. ಶಾಸನಗಳ ಪ್ರಕಾರ ನಮಗೆ ಲಭ್ಯವಿರುವುದು "ಕವಿರಾಜಮಾರ್ಗ" ಕೃತಿಯ ಕರ್ತೃ ಶ್ರೀ ವಿಜಯ. ನೃಪತುಂಗನ ಆಸ್ಥಾನದಲ್ಲಿದ್ದ ಈತನು ಕನ್ನಡದ ಪ್ರಮುಖ ಲಕ್ಷಣಕಾರನಷ್ಠೆ ಅಲ್ಲದೆ ಕನ್ನಡದ ಅಲಂಕಾರಿಕ ಸಾಹಿತ್ಯದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾನೆ. ಕಂದ ಪದ್ಯಗಳ ಛಂದಸ್ಸಿನಲ್ಲಿ ಈ ಕವಿಯ ಬರವಣಿಗೆ ಅತ್ಯಂತ ಉತ್ಕøಷ್ಠವೆನಿಸುತ್ತದೆ. ಹಿಂದೆ ಕರ್ನಾಟಕವು ಭೌಗೋಳಿಕವಾಗಿ ಕಾವೇರಿಯಿಂದ ಆಂಧ್ರದ ಗೋದಾವರಿ ತೀರದವರೆಗೂ ವ್ಯಾಪಿಸಿತ್ತು. ಅಲ್ಲಿ ವಾಸಿಸುತ್ತಿದ್ದ ಜನರು ವಿಷಯ, ವಿಶೇಷ, ಜನಪದ ಸಾಹಿತ್ಯಗಳಿಂದ ತುಂಬಿರುತ್ತಿದ್ದರು. ಇಲ್ಲಿದ್ದವರನ್ನು ಚಲುವರು, ಸ್ವಾಭಿಮಾನಿಗಳು, ಪ್ರೀತಿ ದಯೆಗಳುಳ್ಳವರು ಮತ್ತು ಅಷ್ಟೇ ಉಗ್ರ ಸ್ವಭಾವದವರೂ ಆಗಿರುತ್ತಿದ್ದರು ಎಂದು ಕವಿ ವರ್ಣಿಸಿದ್ದಾನೆ. ಕವಿರಾಜಮಾರ್ಗವು ನಮ್ಮ ನಾಡಿನ ಗುಣ, ಜನ, ಸಂಸ್ಕøತಿಗಳನ್ನು ಅತ್ಯಂತ ರಮಣೀಯವಾಗಿ ಓದುಗರಿಗೆ ಕಟ್ಟಿಕೊಡುತ್ತದೆ. ಇದಕ್ಕಿಂತ ಮುಂಚಿತವಾಗಿಯೇ ಸಾಹಿತ್ಯ ಕೃತಿಗಳು ರಚನೆಯಾಗಿರಬಹುದು.
ಆದಿಕವಿ ಪಂಪನ ಭಾಷಾಭಿಮಾನ ಎಷ್ಠಿತ್ತೇಂದರೆ ನಂದನದಂತಹ ಕನ್ನಡ ನಾಡಿನಲ್ಲಿ ಕೋಗಿಲೆಯಾಗಿಯೋ ಅಥವಾ ಮರಿದುಂಬಿಯಾಗಿಯೋ ಹುಟ್ಟಬೇಕು. ತ್ಯಾಗದ, ಭೋಗದ, ಸಂಗೀತದ ಗೋಷ್ಠಿಗಳ ಇಂಪಿನ ಪ್ರೀತಿಯ ರಸವನ್ನು ತುಂಬಿಕೊಂಡವರು ಕನ್ನಡಿಗರು. ಅಂದಿನ ಸಂಪ್ರದಾಯ, ಸಂಸ್ಕøತಿ ಪಂಪನ ಮನಸ್ಸಿನ ಮೇಲೆ ಎಂತಹ ಪ್ರಭಾವವನ್ನು ಬೀರಿರಬಹುದು ಎಂಬುದು ಎಂತಹವರಿಗೂ ಅರ್ಥವಾಗುತ್ತದೆ. ದಕ್ಷಿಣ ದಿಕ್ಕಿನ ಗಾಳಿ ನೋಡಿದೊಡನೆ ಮಧುರವಾದ ಸಂಗೀತವನ್ನು ಕಿವಿಗಿಕ್ಕಿ ಮೆಲ್ಲಗೆಯ ಸುವಾಸನೆ, ಕೆಂಬಣ್ಣನ ಹೊಳಪಿನ ಪ್ರೀತಿ ಇದ್ದೊಡೆ "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶವಂ" ಎಂದು ಉದ್ಗರಿಸುತ್ತಾನೆ.
ಕವಿ ರಾಘವಾಂಕನು ತನ್ನ ಅಭಿವಾನವನ್ನು ತೋಡಿಕೊಂಡಿರುವುದು ಆತನ ಆತ್ಮ ಪ್ರೀತಿಗೆ ಬಂದು ಉದಾಹರಣೆ. ಈತನ ಕಾವ್ಯದಲ್ಲಿರುವ ಭಾವ, ಪ್ರೀತಿ, ಪದಜೋಡಣೆ ಅಲಂಕಾರವೇ "ಕಾವ್ಯಕನ್ನಿಕೆಗೆ" ಮಾಡಿರುವ ಅಲಂಕಾರವೆನಿಸುತ್ತದೆ. ರಸಿಕರಿಗೆ ಮನೋಸುಖವನ್ನು ನೀಡಬಲ್ಲ ಶಕ್ತಿ ಕಾವ್ಯವೆನಿಸುತ್ತದೆ. ಪರರ ಒಡವೆಯನ್ನು ತೆಗೆದುಕೊಂಡು ನಮ್ಮದೆನ್ನುವುದು, ಪರಭಾಷೆಯಿಂದ ಪದಗಳನ್ನರ್ಥೈಸಿ ನಮ್ಮದೆನ್ನುವುದು ಪರರ ನಿಂದಿಸಿ ತನ್ನದೇ ಮೇಲೆಂದು ಹೊಗಳಿಕೊಳ್ಳದ, ಪರರ ಹೆಣ್ಣುಗಳನ್ನು ಕಂಡು ಛೀಡಿಸದೆ, ಪರ ವಸ್ತು ಪಾಶಾಣಕ್ಕೆ ಸಮಾನ ಎನ್ನುವ ಮೊದಲ ಕವಿ ಎಂಬುದರಲ್ಲಿ ಸಂಶವವಿಲ್ಲ. ದೇಸೀಯ ಛಂದಸ್ಸಿನಲ್ಲಿ ಮೊದಲ ಬಾರಿಗೆ ತಿಳಿಸಿಕೊಟ್ಟ ಕವಿಯಾದ್ದರಿಂದ ಬಹಳ ಸ್ಪಷ್ಟವಾದ ಬರಹಗಳನ್ನು ಕಾಣಬಹುದು.
ಆಂಡಯ್ಯನೆಂಬ ಕವಿಯು ತನ್ನ ಕಾವ್ಯದಲ್ಲಿ ಹಲವು ನಾಲಿಗೆಗಳನ್ನು ಆದಿಶೇಷನಿಂದಲೂ ವರ್ಣಿಸಲಾಗದ, ಮತ್ತಿನಿಂದ ಕೂಡಿದ ಮನುಷ್ಯರಿಗಿಲ್ಲದ, ಮೆಲ್ಲಗೆ ಬೀಸುವ ತಂಗಾಳಿ, ತಿಳಿನೀರಿನಿಂದ ಕೂಡಿದ ಕೆರೆ, ಕಟ್ಟೆ, ಕೊಳ,ಸರೋವರಗಳಿಂದ ಕೂಡಿದ, ಇದಲ್ಲದೆ ಮಲ್ಲಿಗೆ, ಸಂಪಿಗೆ, ದಾಳಿಂಬೆ, ತೆಂಗು, ಮಾವು ಅಡಿಕೆಗಳೇ ಅಲ್ಲದೆ ಇನ್ನೂ ಅನೇಕ ಮರ-ಗಿಡಗಳಿಂದ ತುಂಬಿದ ಕರ್ನಾಟಕವು ಕಂಗೊಳಿಸುತ್ತದೆ.
ದೀಪರಾಜನೆಂಬ ಕವಿಯು ಜಾಣರ ಮೆಚ್ಚುಗೆಗೆ ಪಾತ್ರವಾಗುವ ರಸಿಕರ ರಸಾಯನದಂತಹ ಸರಸ್ವತಿಯ ನುಡಿ ಕೇಳುವ ವಿದ್ವಾಂಸರಿಗೆ ಕನ್ನಡಿ ಮತ್ತು ಬಳ್ನುಡಿಗಳು ಅಮೃತವೆನಿಸುತ್ತವೆ. ಕರ್ನಾಟಕದ ಇನ್ನೊಂದು ಹೆಸರೇ ಬೆಳುವಾಲನಾಡು. ಶಾಶ್ವತವಾದ ಹಿಮಗಿರಿಗೆ ದಕ್ಷಿಣದಲ್ಲಿರುವ, ಸತ್ಯ, ಸಚ್ಚಾರಿತ್ಯ, ಸಂಪತ್ತಿನಲ್ಲಿ ಮೆರೆದಿರುವುದು ಬೆಳುವಲನಾಡು ಎಂದು ಕವಿ ಚಾಮರಸ ಬಹಳ ಸೊಗಸಾಗಿ ವರ್ಣಿಸಿದ್ದಾನೆ.
ಚತುರ್ಮುಖ ಬೊಮ್ಮರಸ (15 ನೇ ಶತಮಾನ) ಎಂಬ ಕವಿಯು ಕನ್ನಡವು ಸಂಸ್ಕøತ ಭಾಷೆಯೊಂದಿಗೆ ಮೇಳೈಸಿ ಕೆಂಪುರತ್ನದಂತೆ, ಪಚ್ಛ ಕರ್ಪೂರದಂತೆ, ಶ್ರೀ ಗಂಧದ ಕಂಪನ್ನೊಳಗೊಂಡ ಕನ್ನಡ ಕಾವ್ಯವನ್ನು ಅತಿ ಬೆಡಗಿನಿಂದ ಹೇಳುತ್ತಾನೆ.
ವಿರೂಪಾಕ್ಷ ಪಂಡಿತನು ತನ್ನ "ಚನ್ನ ಬಸವ ಪುರಾಣ" ಕಾವ್ಯದಲ್ಲಿ ಅಲ್ಲಲ್ಲಿ ಬೆಳೆಗಳು, ಮಳೆಗಳು, ಕೊಳಗಳು, ವನಗಳು, ರನ್ನದಂತಹ ಬಂಡೆಗಳು, ಕಾಲುವೆಗಳು, ಬೆಟ್ಟಗಳು, ಆನೆಗಳು, ಗಿಳಿ-ಕೋಗಿಲೆಗಳು, ನಗರಗಳಿಂದ ತುಂಬಿದ ಈ ನಾಡು ಎಂದು ವರ್ಣಿಸುತ್ತಾನೆ.
ಸರ್ವಜ್ಞನು ತನ್ನ ವಚನಗಳಲ್ಲಿ ಬೇಳೆಯ ತೊವೆಗೆ ಎಮ್ಮೆಯ ಬೆಣ್ಣೆ ಸೇರಿದರೆ ಅಡುಗೆ ರುಚಿಸುತ್ತದೆ. ಅರಿಶಿನ, ಏಲಕ್ಕಿ ಬೆಲ್ಲ, ಮೆಣಸು, ಹಲಸು ಮುಂತಾದ ಬೆಳೆಗಳಿರುವ ಭಾಗವೇ ಮಲೆನಾಡು. ಬೆಂಕಿ, ಮಳೆ, ಕೆಸರು, ಬೆಚ್ಚನೆಯ ಮನೆ, ಇಚ್ಚಯನರಿವ ವಸತಿಯಿರುವ ಮಲೆನಾಡ ನೋಡ ಸರ್ವಜ್ಞ ಎಂದು ವರ್ಣಿಸುತ್ತಾನೆ.
ಗೋವಿಂದ ವೈದ್ಯ ಎಂಬ ಕವಿಯು ಜಾತಿ ಸಂಕರವಿಲ್ಲದ, ಜಡದೇಹಿಗಳಿಲ್ಲದ, ನೀತಿಹೀನರು-ಚೋರರಿಲ್ಲದ, ವಿಶ್ವಾಸ ಘಾತುಕರಿಲ್ಲದ ನಾಡಿದೆಂದು ತನ್ನ ಕೃತಿಗಳಲ್ಲಿ ವರ್ಣಿಸಿದ್ದಾನೆ. ಮಹಾಲಿಂಗರಂಗನೆಂಬ ಕವಿಯು (17 ನೇ ಶತಮಾನ) ಸುಲಿದ ಬಾಳೆಯ ಹಣ್ಣಿನಂತೆ, ಕಳಿದ ಸಿಗುರಿದ ಕಬ್ಬಿನಂತೆ, ಅಳಿದ ಉಷ್ಣದ ಹಾಲಿನಂತೆ ಸುಲಭವಾಗಿರುವ, ಸುಂದರವಾಗಿರುವ ಭಾಷೆಯನ್ನು ತಿಳಿದು ಮುಕ್ತಿಯನ್ನು ಗಳಿಸಿಕೊ ಎಂದು ಕರೆಯಿತ್ತಿದ್ದಾನೆ.
ಸಾಲಿರಾಮಚಂದ್ರರಾಯರು (19ನೇ ಶತವಾನ) ಕನ್ನಡ ನೆಲದ ಹುಲ್ಲು ತುಳಸಿಗೆ ಸಮಾನ, ಕನ್ನಡದ ನದಿಗಳು ದೇವತೆಗಳಿಗೆ, ಕನ್ನಡದ ಕಲ್ಲುಗಳು ಸಾಲಿಗ್ರಾಮ ಶಿಲೆಗೆ, ಕನ್ನಡ ನುಡಿಯು ಗಾಯತ್ರಿ ಮಂತ್ರಕ್ಕೆ ಸಮ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವಿ.ಸೀತಾರಾಮಯ್ಯ, ಕುವೆಂಪು ಮುಂತಾದ ಕವಿಗಳು ನಮ್ಮ ನಾಡನ್ನು ವರ್ಣಿಸುವ ಪರಿ ಅವಲೋಕನಾತೀತ ಎಂದರು.
1980ರಲ್ಲಿ ಶ್ರೀ ಕೆಂಗಲ್ ಹನುಮಂತಯ್ಯನವರು ರಾಜಕಾರಣಿಯಾದರೂ ಸಹ ತಮ್ಮ ಕಾವ್ಯದ ಮೂಲಕ ಕನ್ನಡ ನಾಡು-ನುಡಿಯನ್ನ ನೆನೆದಿದ್ದಾರೆ ಎಂದು ತಿಳಿಸಿದರು. ನಂತರ ನಡೆದ ಕವಿಗೋಷ್ಠಿ ಮತ್ತು ಸಂವಾದದಲ್ಲಿ ಶ್ರೀ ಎಸ್.ಎಲ್. ಚನ್ನೇಗೌಡ, ಲಕ್ಷ್ಮಣ ಬಳೂಟಗಿ, ಬೇಲೂರು ಸೀತಾರಾಮ್, ನವಾಬ್ ಬೇಲೂರು, ಡಾ!!ಜಯಚಂದ್ರ ಗಪ್ತ, ಚಂದ್ರಕಾಂತ ಪಡೇಸೂರ್, ಕೊಟ್ರೇಶ ಎಸ್. ಉಪ್ಪಾರ್, ಗೊರೂರು ಅನಂತರಾಜು, ಜ.ಹೊ. ನಾರಾಯಣಸ್ವಾಮಿ, ಶೀಟಿ, ಶ್ರೀಮತಿ ಶಾಂತಾ ಅತ್ನಿ, ಪ್ರೋ!! ಶಹಬುದ್ದೀನ ಮುಂತಾದವರು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಶ್ರೀ ಸುರೇಶ್ ಗುರೂಜಿ ಪ್ರಾರ್ಥಿಸಿದರು. ಡಾ!!ಜಯಚಂದ್ರಗುಪ್ತ ಸ್ವಾಗತಿಸಿದರು. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಡೆದ ಜನತಾಮಾಧ್ಯಮ ಪತ್ರಿಕೆಯ ಸಂಪಾದಕರಾದ ಆರ್.ಪಿ. ವೆಂಕಟೇಶಮೂರ್ತಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮೇಟಿಕೆರೆ ಹಿರಿಯಣ್ಣ ನವರನ್ನು ಸಭೆ ಅಭಿನಂದಿಸಿತು.
ನೂತನ ಸಂಚಾಲಕರ ನೇಮಕ
ಇದೇ ಸಂದರ್ಭದಲ್ಲಿ ಸಂಚಾಲಕ ಶೀಟಿಯವರನ್ನು ಅಭಿನಂದಿಸಿ ಶ್ರೀ ಕೊಟ್ರೇಶ್ ಎಸ್. ಉಪ್ಪಾರರವರನ್ನು ನೂತನ ಸಂಚಾಲಕರನ್ನಾಗಿ ಆಯ್ಕೆ ಮಾಡಿ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಕಡೆಯಲ್ಲಿ ಸಂಚಾಲಕ ಶೀಟಿಯವರು ವಂದಿಸಿದರು.
ಎಸ್. ಸತ್ಯನಾರಾಯಣ (ಶೀಟಿ),
ಸಂಚಾಲಕರು ಮತ್ತು ಸದಸ್ಯರು,
ಮನೆ-ಮನೆ ಕವಿಗೋಷ್ಠಿ, ಹಾಸನ




0 comments:
Post a Comment