Subscribe:

Ads 468x60px

ಇಲ್ಲಿ ಯಾರು ಮುಖ್ಯರಲ್ಲ, ಇಲ್ಲಿ ಯಾರು ಅಮುಖ್ಯರಲ್ಲ.

201 ನೆಯ ಮನೆ ಮನೆ ಕವಿಗೋಷ್ಠಿ

ಹಾಸನ :-  ಸಂಸ್ಕøತ ಭೂಯಿಷ್ಮವಾಗಿ ಇದ್ದಂತಹ ಜೈನ ಸಾಹಿತ್ಯ ಜನಸಮಾನ್ಯರಿಗೆ ಅರ್ಥವಾಗದ ಸಂದರ್ಭದಲ್ಲಿ ವಚನ ಸಾಹಿತ್ಯ ಸೃಷ್ಟಿಯಾಗಿ, ನೇರವಾಗಿ ಯಾವುದೇ ವ್ಯಾಕರಣ, ಛಂದಸ್ಸಿಗೆ ಒಳಗಾಗದೇ ಜನಮನಕ್ಕೆ ತಲುಪಿ ಸಾಹಿತ್ಯ ಕ್ರಾಂತಿಯಾಯಿತು. ತಮ್ಮ ಇಷ್ಟ ದೈವವನ್ನು ವಚನಾಂಕಿತವಾಗಿಟ್ಟುಕೊಂಡು ಬರೆದ ಕಾಲಘಟ್ಟ, ಕ್ರಾಂತಿಕಾರಿ ವಿಚಾರಗಳು, ಸಾಮಾಜಿಕ ಚಿಂತನೆ ನಂತರ ಬಂದಂತಹ ದಾಸಸಾಹಿತ್ಯದ ಮೇಲೆ, ಕೀರ್ತನಕಾರರ  ಮೇಲೆ ಪರಿಣಾಮಬೀರಿದವು ಎಂದು ಎಸ್.ಎಂ. ದೇವರಾಜೇಗೌಡ ಹೇಳಿದರು.

ಅವರು ನಗರದ ಆನಂದ ಭಾರತಿ ವಿದ್ಯಾ
ಮಂದಿರದಲ್ಲಿ ನವಾಬ್ ಬೇಲೂರ್ ರವರ ಪ್ರಾಯೋಜಕತ್ವದಡಿಯಲ್ಲಿ ನಡೆದ 201 ನೆಯ ಮನೆ ಮನೆ ಕವಿಗೋಷ್ಠಿಯಲ್ಲಿ ‘ಕನಕ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ’ ಎಂಬ ವಿಷಯದಡಿ ವಿಚಾರಮಂಡನೆ ಮಾಡುತ್ತಾ ಕನ್ನಡ ಸಾಹಿತ್ಯದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು ವಚನ ಸಾಹಿತ್ಯ ಯುಗ ನಂತರ ದಾಸಸಾಹಿತ್ಯ ಯುಗಗಳಲಿ.್ಲ ವಚನಕಾರರು ಯಶಸ್ವಿಯಾಗಲು ಅವರು ಬಳಸಿದ ಜನಸಾಮಾನ್ಯ ಭಾಷೆ, ವಚನ ಸಾಹಿತ್ಯದಲ್ಲಿ ಕೊಲುವವನೇ ಮಾದಿಗ. ಹೊಲಸು ತಿಂಬುವವನೇ ಹೊಲೆಯ ಎಂಬಂತೆ ವ್ಯಕ್ತಿಯ ಗುಣಕೃತ್ಯಗಳು ಬಿಂಬಿತವಾಗಿವೆ. ಇಲ್ಲಿ ಜಾತಿಗೆ ಜೋತು ಬೀಳುವ ಪ್ರಶ್ನೆಯೇ ಇಲ್ಲ. ಅದು ವೈಚಾರಿಕದಡಿಯಲ್ಲಿ ಸೃಷ್ಠಿಯಾದ ಸಾಹಿತ್ಯ. ಒಂದು ಸಾಮಾಜಿಕ ಕಳಕಳಿ . ಈ ಎಲ್ಲಾ ವಚನಕಾರರ ಪರಿಣಾಮ ಹಾಗೂ ಪಂಪನ ಮಾನವ ಜಾತಿ ತಾನೊಂದೇ ವಲಂ ಎಂಬುದು ಹಾಗೂ ನಯಸೇನನ ಕನ್ನಡ ಮತ್ತು ಸಂಸ್ಕøತದ ಮಿಶ್ರಣ ತುಪ್ಪ ಹಾಗೂ ಬೆಣ್ಣೆಯಂತಾಗುತ್ತದೆ. ಆದ್ದರಿಂದ ಸಾಹಿತ್ಯ ಸಂಸ್ಕøತ ಇಲ್ಲವೇ ಕನ್ನಡದಲ್ಲಾಗಲಿ ಎಂಬ ಮಾತುಗಳು ದಾಸರ ಮೇಲೆ ಪರಿಣಮ ಬೀರಿದವು.
ವಚನಕಾರರು ಮತ್ತು ಕೀರ್ತನಕಾರರು ಇಷ್ಟಧೈವವನ್ನು ಕೇಂದ್ರವಾಗಿರಿಸಿಕೊಂಡು ಜನಸಾಮಾನ್ಯ ಭಾಷೆಯಲ್ಲಿ ವೈಚಾರಿಕ, ವೈಜ್ಞಾನಿಕ, ಜಾತ್ಯಾತೀತ, ಧರ್ಮಾತೀತ ವಿಚಾರಗಳು ಒಡಮೂಡಿ ಬಂದು ರೂಢಮೂಲದಿಂದ ಬಂದಂತಹಜಾತಿಪದ್ದತಿಯನ್ನು ನಿರ್ಮೂಲನೆ ಮಾಡಿ ಒಂದು ಸುಂದರ ಸಮಾಜದ ನಿರ್ಮಾಣದ ಕನಸು, ವಿಶ್ವಮಾನವ ಸಂದೇಶದ ಗುರಿಹೊತ್ತವುಗಳಾಗಿದ್ದವು. ವಚನಕಾರರು ಶೈವಪಂಥದವರಾದರೆ ಕೀರ್ತನಕಾರರು ವೈಷ್ಣವ ಪಂಥದವರಾದರೂ ಅವರೀರ್ವರ ಗುರಿ ಒಂದೇಯಾಗಿತ್ತು.
ವಾದಿರಾಜರು, ಪುರಂದರದಾಸರು, ಕನಕದಾಸರಿ ದಾಸ ಸಾಹಿತ್ಯದ ತ್ರಿವೇಣಿ ಸಂಗಮಗಳೆಂದರೆ ಅತಿಶಯೋಕ್ತಿಯಾಗಲಾರದು. ಬಹುಮುಖ್ಯವಾಗಿ ಕನಕದಾಸರ ಬಗ್ಗೆ ಹೇಳುವುದಾದರೆ ಅವರ ಹುಟ್ಟುವಿನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಗದೇ ಇದ್ದರೂ 15 ನೆಯ ಶತಮಾನದ ಅಚಿತಿಮದಲ್ಲಿ ಒಂದು ಪಾಳೆಗಾರರ ಕುಟುಂಬದಲ್ಲಿ ಜನಿಸಿದ ಅವರು ಶೂದ್ರರ ಕೌಟುಂಬಿಕ ವ್ಯವಸ್ಥೆ ಬಗ್ಗೆ ಚಿಂತಿಸಿ, ವಿಧ್ಯಾರ್ಥಿ ಜೀವನದಿಂದಲೇ ಆಧ್ಯಾತ್ಮಕತೆಯೆಡೆಗೆ ಅವರ ಮನಸ್ಸು ತುಡಿಯುತಿತ್ತು. ತಿರುಮಲಾಚಾರ್ಯ ಹಾಗೂ ವ್ಯಾಸರಾಯರ ಕೃಪೆಯಿಂದ ಅಲೌಕಿಕ ಜೀವನದ ಮೌಲಿಕಗಳನ್ನು ಅಂತರ್ಗತಮಾಡಿಕೊಂಡು ಜ್ಞಾನ ಕಣಜವಾಗುತ್ತಾರೆ.
ತಂದೆ, ಹೆಂಡತಿ, ಮಗನನ್ನು ಕಳೆದುಕೊಂಡನಂತರ ವೈರಾಗ್ಯ ಜೀವನದತ್ತ ವಾಲುವ ಕನಕದಾಸರು ಸಂಪೂರ್ಣವಾಗಿ ಸಮಾಜಪರ ಚಿಂತಕರಾಗಿ, ಮಹಾನ್‍ಯೋಗುಗಳಾಗಿ ಭೋಗಜೀವನದ ಐಹಿಕ ಸುಖವನ್ನು ತಮ್ಮ ಕೀರ್ತನೆಗಳಲ್ಲಿ ಬಿಂಬಿಸತೊಡಗುತ್ತಾರೆ. ಸ್ವಾಭಿಮಾನಿ ಹಾಗೂ ಅಪಾರ ಆತ್ಮವಿಶ್ವಾಸವನ್ನಿಟ್ಟುಕೊಂಡ ಕನಕದಾಸರು ಹಳ್ಳಿ ಹಳ್ಳಿಗೆ ತೆರಳಿ ಸಾಮಾಜಿಕ ಜಾಡ್ಯಗಳನ್ನು ತೊಲಗಿಸಲು ಕೀರ್ತನೆಗಳನ್ನು ಹಾಡುತ್ತಾ ಪರಿವರ್ತನಾ ಚಳುವಳಿಗೆ ಭದ್ರ ಬುನಾದಿಯಾಗುತ್ತಾ ಸಾಗುತ್ತಾರೆ ಎಂದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಸಂಚಾಲಕರಾದ ಕೊಟ್ರೇಶ್ ಎಸ್,ಉಪ್ಪಾರ್, ಶೀಟಿ, ಚಂದ್ರಕಾಂತ ಪಡೆಸೂರು, ಕೆ.ಸಿ.ಗೀತ, ಎಚ್.ವೇದಶ್ರೀರಾಜ್, ಜಿ.ಎಸ್.ಕಲಾವತಿಮಧುಸೂಧನ್, ರಾಜೇಶ್ವರಿ ಹುಲ್ಲೇನಹಳ್ಳಿ, ಸುಶೀಲಾಸೋಮಶೇಖರ್, ಲಲಿತ.ಎಸ್, ಶ್ರೀನಿವಾಸ ಡಿ ಶೆಟ್ಟಿ, ನವಾಬ್ ಬೇಲೂರ್, ಗೊರೂರು ಅನಂತರಾಜ್, ದ್ಯಾವನೂರ್ ಮಂಜುನಾಥ, ಎನ್.ಗಂಗಾಧರ, ಸ್ವರೂಪರಾಣಿ, ಬಿ.ವೇದಾವತಿ, ರಮೇಶ್, ಲೀಲಾವತಿ ಮುಂತಾದ ಕವಿ ಕವಯತ್ರಿಯರು ಕವನ ವಾಚಿಸಿದರು.
ಎರಡೂ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷಿಣಿಯಾದ ಲೀಲಾವತಿ ಮಾತನಾಡಿ ಕಾವ್ಯ ಮಾನವ ಕುಲದ ಹೊಂಬೆಳಕು, ಕಾವ್ಯ ಕಟ್ಟುವ ಕೆಲಸ ನಿರಂತರವಾಗಿರಬೇಕು. ಇಂಥ ಕೆಲಸವನ್ನು ಕಳೆದ ಒಂದೂವರೆ ದಶಕದಿಂದ ಮನೆ ಮನೆ ಕವಿಗೋಷ್ಠಿ ಮಾಡುತ್ತಾ ಬಂದಿದೆ. ಆದರೆ ಇದರಿಂದ ಬೆಳೆದ ಅನೇಕರು ನಿರ್ಲಕ್ಷ್ಯಭಾವನೆ ತೋರಿಸುತ್ತಿರುವುದು ಒಂದು ದುರಂತ ಎಂದು ಅಭಿಪ್ರಾಯಪಡುತ್ತಾ, ಎಲ್ಲರೂ ಈ ಕಡೆಗೆ ಮುಖಮಾಡಿದಾಗ ಸಜ್ಜನರ ಒಕ್ಕೂಟ ನಿರ್ಮಾಣವಾಗಲು ಸಾಧ್ಯ ಎಂದರು.
ಸಂಚಾಲಕರಾದ ಕೊಟ್ರೇಶ್ ಎಸ್.ಉಪ್ಪಾರ್ ನಿರೂಪಿಸಿದರು, ಕಲಾವತಿಮಧುಸೂಧನ್ ಪ್ರಾರ್ಥಿಸಿದರು, ನವಾಬ್ ಬೇಲೂರು ಸ್ವಾಗತಿಸಿದರು, ಕೊನೆಯಲ್ಲಿ ಹಿರಿಯ ಸದಸ್ಯರಾದ ಚಂದ್ರಕಾಂತ ಪಡೆಸೂರು ವಂದಿಸಿದರು.

0 comments:

Post a Comment

 
Blogger Templates