ಹಾಸನ ಜೂ. 2: ಅಮೂರ್ತ ಭಾವದ ಮೂರ್ತೀಕರಣದ ಪ್ರಯತ್ನವೇ ಪ್ರತಿಮಾ ವಿಧಾನ. ಇದು ಕಾವ್ಯಕ್ಕೆ ಸಂಕ್ಷಿಪ್ತತೆಯನ್ನು , ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸುವ ಶಕ್ತಿಯನ್ನು ತಂದು ಕೊಡುತ್ತದೆ ಎಂದು ಸಾಹಿತಿ ಚಂದ್ರಕಾಂತ ಪಡೆಸೂರ ಹೇಳಿದರು.
ನಗರದ ಅಗ್ರಹಾರದ “ಕಾಮಧೇನು” ನಿಲಯದಲ್ಲಿ ಶ್ರೀಮತಿ ಸುಕನ್ಯ ಮುಕುಂದ ಅವರ ಪ್ರಾಯೋಜಕತ್ವದಲ್ಲಿ ನಡೆದ 207 ನೆಯ ಮನೆ ಮನೆ ಕವಿಗೋಷ್ಟಿಯಲ್ಲಿ ಅವರು `ಕನ್ನಡ ಕಾವ್ಯದಲ್ಲಿ ಪ್ರತಿಮಾ ವಿಧಾನ’ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.
ಸಾಮಾನ್ಯ ಮನುಷ್ಯನ ಭಾವಕ್ಕೆ ನಿಲುಕಲಾರದ ತತ್ತ್ವ ಅಥವಾ ವಿಚಾರಗಳ ದೃಶ್ಯೀಕರಣವೇ ಪ್ರತಿಮಾ ವಿಧಾನ, ಈ ಹಿನ್ನಲೆಯಲ್ಲಯೇ ಶಿವ, ವಿಷ್ಣು, ಕೃಷ್ಣ, ರಾಮ ಮುಂತಾದ ದೇವರುಗಳ ಮೂರ್ತರೂಪ ಮೂಡಿಬಂದದ್ದು. ವಿಶ್ವ ವ್ಯಾಪಕವಾದ ದೈವತ್ವವನ್ನು ಮೂರ್ತಿಕರಿಸುವ ಈ ವಿಧಾನ ಸಾಹಿತ್ಯಾ ಪರಂಪರೆಯಲ್ಲಿಯೂ ಭಾವಗಳ ಮೂರ್ತೀಕರಣದಲ್ಲಿ ಅಳವಡಿಕೆಯಾಯಿತು.
`ಕೊರಳಲ್ಲಿ ಕಟ್ಟಿದಾ ಬೆಂಡು, ಕಾಲಲ್ಲಿ ಕಟ್ಟಿದಾ ಗುಂಡು;
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು’
ಎನ್ನುವಲ್ಲಿ ಲೌಕಿಕ ಹಾಗೂ ಪಾರಲೌಕಿಕತೆಯ ವೈರುಧ್ಯಗಳನ್ನು ಕವಿ ಪ್ರತಿಮೆಯಲ್ಲಿ ಬಿಚ್ಚಿಡುವುದನ್ನು ಕಾಣುತ್ತೇವೆ.
`ಮೋಡಗಳ ಜಡೆಬಿಚ್ಚಿ ಮೈದೊಳೆದುಕೊಳುತಿಹಳು ಬಯಲ ಭಾಮಿನಿ; ಜಗದ ಮಣೆಯ ಮೇಲೆ. ಕೇಶರಾಶಿಯ ನೀರು ತೊಟ್ಟಕ್ಕಿ ಸುರಿಯುತಿದೆ ಜಗವೆನ್ನುವುದಿದಕೆ ಮಳೆಯ ಲೀಲೆ!’
ಇಲ್ಲಿ ಮಳೆಯ ಸನ್ನಿವೇಶವಿದ್ದರೂ ಇಡೀ ವಿಶ್ವವನ್ನೇ ಸ್ತ್ರೀಯಾಗಿ ಭಾವಿಸಿ ಕವಿ ಇಲ್ಲಿ ಪ್ರತಿಮಾ ವಿಧಾನವನ್ನು ಮನ ಮೋಹಕವಾಗುವಂತೆ ಬಳಸಿದ್ದಾರೆ ಎಂದು ಬಣ್ಣಿಸಿದರು.
“ನಾ ಮೆಚ್ಚಿದ ಕವಿತೆ” ಎಂಬ ವಿಷಯದಡಿ ಹಿರಿಯ ಸಾಹಿತಿ ಜ.ಹೊ. ನಾರಾಯಣಸ್ವಾಮಿ ಮಾತನಾಡಿ, ಕುವೆಂಪು ಅವರ `ರಸೋವೈಸಃ’ ಹಾಗೂ `ರಸೋ ಸಿದ್ಧಿ’ ಎಂಬ ಸುನೀತ ಪದ್ಯಗಳನ್ನು ವಾಚಿಸಿ ವಿಶ್ಲೇಷಣೆ ನೀಡಿ ಕವಿತೆಯಲ್ಲಿ ರಸ ಸಿದ್ದಿಗಳ ಬಗ್ಗೆ ತಿಳಿಸಿದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್, ಭೈರಪ್ಪಾಜಿ, ಮುಕುಂದ, ಡಾ. ಕೆ.ಕೆ ಜಯಚಂದ್ರಗುಪ್ತ, ಎನ್.ಎಲ್. ಚನ್ನೇಗೌಡ, ಪ್ರೊ. ನಾರಾಯಣ ಪ್ರಸಾದ್, ಸಿಂಧುಶ್ರೀ, ಪ್ರೊ. ಸೈಯದ್ ಶಹಬುದ್ದೀನ್, ಬಿ. ವೇದವತಿ, ಶ್ರೀ ವಿಜಯ ಹಾಸನ, ಸುಕನ್ಯಾ ಮುಕುಂದ, ಸಮುದ್ರವಳ್ಳಿ ವಾಸು, ಸುರೇಶ್ ಗುರೂಜಿ, ಲಲಿತ. ಎಸ್. ಚೂಡಾಮಣಿ, ದ್ಯಾವನೂರು ಮಂಜುನಾಥ, ಚಂದ್ರಕಾಂತ ಪಡೆಸೂರ ಮುಂತಾದವರು ಕಾವ್ಯವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷಿಣಿ ಶ್ರೀಮತಿ ಲೀಲಾವತಿ, ಸಾ.ನಂ. ನಾಗರಾಜು, ಹೊನ್ನವಳ್ಳಿ ಕೃಷ್ಣಮೂರ್ತಿ ಮುಂತಾದವರು ಭಾಗವಹಿಸಿದ್ದರು.
ಸಿಂಧುಶ್ರೀ ಎಂ. ಆತ್ರೇಯ ಪ್ರಾರ್ಥಿಸಿದರು, ಸಂಚಾಲಕರಾದ ಕೊಟ್ರೇಶ್ ಎಸ್. ಉಪ್ಪಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ನಗರದ ಅಗ್ರಹಾರದ “ಕಾಮಧೇನು” ನಿಲಯದಲ್ಲಿ ಶ್ರೀಮತಿ ಸುಕನ್ಯ ಮುಕುಂದ ಅವರ ಪ್ರಾಯೋಜಕತ್ವದಲ್ಲಿ ನಡೆದ 207 ನೆಯ ಮನೆ ಮನೆ ಕವಿಗೋಷ್ಟಿಯಲ್ಲಿ ಅವರು `ಕನ್ನಡ ಕಾವ್ಯದಲ್ಲಿ ಪ್ರತಿಮಾ ವಿಧಾನ’ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.
ಸಾಮಾನ್ಯ ಮನುಷ್ಯನ ಭಾವಕ್ಕೆ ನಿಲುಕಲಾರದ ತತ್ತ್ವ ಅಥವಾ ವಿಚಾರಗಳ ದೃಶ್ಯೀಕರಣವೇ ಪ್ರತಿಮಾ ವಿಧಾನ, ಈ ಹಿನ್ನಲೆಯಲ್ಲಯೇ ಶಿವ, ವಿಷ್ಣು, ಕೃಷ್ಣ, ರಾಮ ಮುಂತಾದ ದೇವರುಗಳ ಮೂರ್ತರೂಪ ಮೂಡಿಬಂದದ್ದು. ವಿಶ್ವ ವ್ಯಾಪಕವಾದ ದೈವತ್ವವನ್ನು ಮೂರ್ತಿಕರಿಸುವ ಈ ವಿಧಾನ ಸಾಹಿತ್ಯಾ ಪರಂಪರೆಯಲ್ಲಿಯೂ ಭಾವಗಳ ಮೂರ್ತೀಕರಣದಲ್ಲಿ ಅಳವಡಿಕೆಯಾಯಿತು.
`ಕೊರಳಲ್ಲಿ ಕಟ್ಟಿದಾ ಬೆಂಡು, ಕಾಲಲ್ಲಿ ಕಟ್ಟಿದಾ ಗುಂಡು;
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು’
ಎನ್ನುವಲ್ಲಿ ಲೌಕಿಕ ಹಾಗೂ ಪಾರಲೌಕಿಕತೆಯ ವೈರುಧ್ಯಗಳನ್ನು ಕವಿ ಪ್ರತಿಮೆಯಲ್ಲಿ ಬಿಚ್ಚಿಡುವುದನ್ನು ಕಾಣುತ್ತೇವೆ.
`ಮೋಡಗಳ ಜಡೆಬಿಚ್ಚಿ ಮೈದೊಳೆದುಕೊಳುತಿಹಳು ಬಯಲ ಭಾಮಿನಿ; ಜಗದ ಮಣೆಯ ಮೇಲೆ. ಕೇಶರಾಶಿಯ ನೀರು ತೊಟ್ಟಕ್ಕಿ ಸುರಿಯುತಿದೆ ಜಗವೆನ್ನುವುದಿದಕೆ ಮಳೆಯ ಲೀಲೆ!’
ಇಲ್ಲಿ ಮಳೆಯ ಸನ್ನಿವೇಶವಿದ್ದರೂ ಇಡೀ ವಿಶ್ವವನ್ನೇ ಸ್ತ್ರೀಯಾಗಿ ಭಾವಿಸಿ ಕವಿ ಇಲ್ಲಿ ಪ್ರತಿಮಾ ವಿಧಾನವನ್ನು ಮನ ಮೋಹಕವಾಗುವಂತೆ ಬಳಸಿದ್ದಾರೆ ಎಂದು ಬಣ್ಣಿಸಿದರು.“ನಾ ಮೆಚ್ಚಿದ ಕವಿತೆ” ಎಂಬ ವಿಷಯದಡಿ ಹಿರಿಯ ಸಾಹಿತಿ ಜ.ಹೊ. ನಾರಾಯಣಸ್ವಾಮಿ ಮಾತನಾಡಿ, ಕುವೆಂಪು ಅವರ `ರಸೋವೈಸಃ’ ಹಾಗೂ `ರಸೋ ಸಿದ್ಧಿ’ ಎಂಬ ಸುನೀತ ಪದ್ಯಗಳನ್ನು ವಾಚಿಸಿ ವಿಶ್ಲೇಷಣೆ ನೀಡಿ ಕವಿತೆಯಲ್ಲಿ ರಸ ಸಿದ್ದಿಗಳ ಬಗ್ಗೆ ತಿಳಿಸಿದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್, ಭೈರಪ್ಪಾಜಿ, ಮುಕುಂದ, ಡಾ. ಕೆ.ಕೆ ಜಯಚಂದ್ರಗುಪ್ತ, ಎನ್.ಎಲ್. ಚನ್ನೇಗೌಡ, ಪ್ರೊ. ನಾರಾಯಣ ಪ್ರಸಾದ್, ಸಿಂಧುಶ್ರೀ, ಪ್ರೊ. ಸೈಯದ್ ಶಹಬುದ್ದೀನ್, ಬಿ. ವೇದವತಿ, ಶ್ರೀ ವಿಜಯ ಹಾಸನ, ಸುಕನ್ಯಾ ಮುಕುಂದ, ಸಮುದ್ರವಳ್ಳಿ ವಾಸು, ಸುರೇಶ್ ಗುರೂಜಿ, ಲಲಿತ. ಎಸ್. ಚೂಡಾಮಣಿ, ದ್ಯಾವನೂರು ಮಂಜುನಾಥ, ಚಂದ್ರಕಾಂತ ಪಡೆಸೂರ ಮುಂತಾದವರು ಕಾವ್ಯವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷಿಣಿ ಶ್ರೀಮತಿ ಲೀಲಾವತಿ, ಸಾ.ನಂ. ನಾಗರಾಜು, ಹೊನ್ನವಳ್ಳಿ ಕೃಷ್ಣಮೂರ್ತಿ ಮುಂತಾದವರು ಭಾಗವಹಿಸಿದ್ದರು.
ಸಿಂಧುಶ್ರೀ ಎಂ. ಆತ್ರೇಯ ಪ್ರಾರ್ಥಿಸಿದರು, ಸಂಚಾಲಕರಾದ ಕೊಟ್ರೇಶ್ ಎಸ್. ಉಪ್ಪಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

0 comments:
Post a Comment