Subscribe:

Ads 468x60px

ಇಲ್ಲಿ ಯಾರು ಮುಖ್ಯರಲ್ಲ, ಇಲ್ಲಿ ಯಾರು ಅಮುಖ್ಯರಲ್ಲ.

206 ನೆಯ ಮನೆ ಮನೆ ಕವಿಗೋಷ್ಠಿ

ಹಾಸನ :ಬಸವಣ್ಣನವರು ಒಬ್ಬ ಯುಗ ಪ್ರವರ್ತಕರು. ಪ್ರಸಿದ್ಧ ಜಾಗತಿಕ ವಿಚಾರವಾದಿಗಳಲ್ಲಿ ಬುದ್ದ ಮೊದಲನೆಯವರಾದರೆ ಬಸವಣ್ಣನವರೇ ಎರಡನೇಯವರು ಎಂದು ಕವಯಿತ್ರಿ ಭಾರತಿ ಹಾದಿಗೆ ಹೇಳಿದರು.
      ಅವರು ವಿವೇಕನಗರದ ಎಸ್.ಎನ್. ಯೋಗೀಶ್ ರವರ ಮನೆಯಲ್ಲಿ ನಡೆದ 206 ನೆಯ ಮನೆ ಮನೆ ಕವಿಗೋಷ್ಠಿಯಲ್ಲಿ `ಬಸವ ಸಾಹಿತ್ಯದಲ್ಲಿ ವೈಚಾರಿಕತೆ’ ಎಂಬ ವಿಷಯದಡಿ ಉಪನ್ಯಾಸ ನೀಡಿದ  ಅವರು ಬಸವಣ್ಣನವರು ಅರ್ಥಶಾಸ್ತ್ರಜ್ಞರಾಗಿ, ವೈಚಾರಿಕ ಮೂಲ ಸೆಲೆಯಾಗಿ, ಸಮಾನತೆಯ ಹರಿಕಾರರಾಗಿ, ಅಗ್ರಗಣ್ಯ ವಚನಕಾರರಾಗಿ ವಿಶ್ವಮಾನವೀಯತೆಯ ಸಂದೇಶ ನೀಡಿದ ಮಹಾನುಭವ.
       ಅಕ್ಕನಿಗಿಲ್ಲದ ಧೀಕ್ಷೆ, ಮುಂಜಿ ವಿಧಾನಗಳು ತನಗ್ಯಾಕೆ ಹೆಣ್ಣಿಗೊಂದು ಗಂಡಿಗೊಂದು ಅದ್ಯಾವ ಸಂಪ್ರದಾಯವೆಂದು ಬಾಲಕನಾಗಿದ್ದಾಗಲೇ ಸಿಡಿದೆದ್ದು ವೈಚಾರಿಕ ಕ್ರಾಂತಿ ಮಾಡುವುದರ ಮೂಲಕ ಹೆಣ್ಣಿನ ಸಮಾನತೆಯ ಬಗ್ಗೆ ಚಿಂತಿಸಿದನು.

      ಕಾಯಕವೇ ಕೈಲಾಸವೆಂಬ ಉದ್ಘೋಷ ಮೊಳಗಿಸಿ ಪ್ರತಿಯೊಬ್ಬರೂ ಜಾತ್ಯಾತೀತ, ಧರ್ಮಾತೀತವಾಗಿ ಕಾಯಕದಲ್ಲಿ ತೊಡಗಿ ಸಮಾಜಪರ ಕಾರ್ಯಗಳಲ್ಲಿ ತೊಡಗುವಂತೆ ಪ್ರೇರೇಪಿಸಿದರು.
     ಅನುಅಬವ ಮಂಟಪದಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತಾಧಿಗಳಿಗೆ ದಾಸೋಹ ಕಾರ್ಯವನ್ನು ಇತರ ಶರಣರ ಸಹಯೋಗದಲ್ಲಿ ಮಾಡುತಿದ್ದರು. ಜಾತಿ, ಮತ, ಧರ್ಮ ಮೀರಿದ ಮಹಾಮನೆ ಅದಾಗಿತ್ತು. ಇವನಾರವ ಇವನಾರವ ಎಂದೆನ್ನದೆ ಇವನಮ್ಮವ ಇವನಮ್ಮವ ಎಂದು ಎಲ್ಲರನ್ನೂ ಕೈ ಬೀಸಿ ಕರೆವ ಪುಣ್ಯ ಕ್ಷೇತ್ರ ಅದಾಗಿತ್ತು. ವೇದ, ಶಾಸ್ತ್ರ, ಮೌಢ್ಯ-ಕಂದಚಾರಗಳನ್ನು ದಿಕ್ಕರಿಸಿ ವೈಚಾರಿಕ ನೆಲೆಗಟ್ಟಿನಲ್ಲಿ ಸಮಾಜವನ್ನು ನಿರ್ಮಿಸಿದರು. ಪೌರೋಹಿತ್ಯ ಜನಾಂಗದಲ್ಲಿ ಜನಿಸಿ, ಜನಿವಾರ ಕಿತ್ತೆಸೆದು ವೀರಶೈವ ಧರ್ಮವನ್ನು ಸ್ವೀಕರಿಸಿ ಮೂರ್ತಿ ಪೂಜೆ ಖಂಡಿಸಿ ಬ್ರಂಹಾಂಡವನ್ನೇ ದೇಗುಲವಾಗಿಸಿ ಮಾನವೀಯ ಮೌಲ್ಯಗಳನ್ನು ಭಿತ್ತಿದ ಯುಗ ಪ್ರವರ್ತಕ ಬಸವಣ್ಣನವರು ಎಂದರು.
    ನಂತರ ನಾ ಮೆಚ್ಚಿದ ಕವಿತೆ ಎಂಬ ವಿಷಯದಡಿ ಕವಯತ್ರಿ ಸುಶೀಲ ಸೋಮಶೇಖರ್ ಅಕ್ಕ ಮಹಾದೇವಿಯ ವಚನ ಓದಿ ವಿಶ್ಲೇಷಣೆ ಮಾಡಿದರು.
    ಸಂಚಾಲಕ ಕೊಟ್ರೇಶ್ ಎಸ್.ಉಪ್ಪಾರ್, ಚಂದ್ರಕಾಂತ ಪಡೆಸೂರ, ಜಯದೇವಪ್ಪ, ಡಾ.ಜಯಚಂದ್ರಗುಪ್ತ, ಶಾಂತ ಅತ್ನಿ, ನವಾಬ್ ಬೇಲೂರು, ಸಮುದ್ರವಳ್ಳಿ ವಾಸು, ಚೂಡಾಮಣಿ, ಭವ್ಯಶ್ರೀ, ಪವನ್ ಆಲೂರು, ಬಿ.ವೇದಾವತಿ, ರಾಜೇಶ್ವರಿ ಹುಲ್ಲೇನಹಳ್ಳಿ, ಮುಂತಾದವರು ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
   ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ಎಸ್.ಎನ್.ಯೋಗೀಶ್, ಫ್ರೊ.ನಾರಾಯಣ ಪ್ರಸಾದ್, ಲಕ್ಷಣ್ ಬಳೂಟಗಿ, ಶೇಷ ಶೆಟ್ಟಿ, ವರ್ಷಿಣಿ, ರೋಹನ್, ಅರ್ಜುನ್, ಪ್ರಜ್ವಲ್, ಶ್ರೀದೇವಿ ಮುಂತಾದವರು ಉಪಸ್ಥಿತರಿದ್ದರು.
ಸಂಚಾಲಕರಾದ ಕೊಟ್ರೇಶ್ ಎಸ್.ಉಪ್ಪಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

0 comments:

Post a Comment

 
Blogger Templates