Subscribe:

Ads 468x60px

ಇಲ್ಲಿ ಯಾರು ಮುಖ್ಯರಲ್ಲ, ಇಲ್ಲಿ ಯಾರು ಅಮುಖ್ಯರಲ್ಲ.

203ನೇ ‘ಮನೆ ಮನೆ’ ಕವಿಗೋಷ್ಠಿ

ಹಾಸನ :- ಒಂದು ಕವಿತೆ ಸಫಲವಾಗುವುದು ಕವಿ ಭಾವನೆಗಳ ಬಿಳಿಲುಗಳನ್ನು ಹಿಡಿದು ಭೂತ, ಭವಿಷತ್ತು, ವರ್ತಮಾನಗಳನ್ನು ಒಂದು ಬಿಂದುವಿನಲ್ಲಿ ಕೇಂದ್ರಿಕರಿಸಿದಾಗ ಮಾತ್ರ ಸಾಧ್ಯ ಎಂದು ಸಾಹಿತಿ ಗೊರೂರು ಶಿವೇಶ್ ಹೇಳಿದರು.

ಅವರು ಲೇಖಕಿ ಸುಶೀಲಾ ಸೋಮಶೇಖರ್ ಅವರ ಮನೆಯಲ್ಲಿ ನಡೆದ 203ನೇ ‘ಮನೆ ಮನೆ’ ಕವಿಗೋಷ್ಠಿಯಲ್ಲಿ ‘ಚುಣುಕು ಸಾಹಿತ್ಯದಲ್ಲಿ ವೈಚಾರಿಕತೆ’ ಎಂಬ ವಿಷಯದಡಿ ಉಪನ್ಯಾಸ ನೀಡುತ್ತಾ ಸಾಹಿತ್ಯಕ ಪ್ರಕಾರಗಳಲ್ಲಿಯೇ ಅತಿ ಹೆಚ್ಚು ತೀಕ್ಷಣವಾಗಿ ಪ್ರಭಾವ ಬೀರುವುದು ಚುಟುಕು ಮಾತ್ರ. ಇದರಲ್ಲಿ ಹಾಸ್ಯ. ಸಾಮಾಜಿಕ ಮೌಲ್ಯಗಳು, ವೈಚಾರಿಕತೆ, ವಿಡಂಬನೆ, ವಿಜ್ಞಾನ, ಸಂಸ್ಕøತಿ ಹಲವು ಮುಖಗಳು ಅಡಕವಾಗಿವೆ.

ನಿನ್ನ ಪಾದದ ಧÀೂಳು, ನನ್ನ ಹಣೆಯ ಮೇಲಿರಲಿ, ಆ ಧೂಳೆಂದು ಕಣ್ಣಿಗೆ ಬೀಳದಿರಲಿ. ಹೀಗೆ ಎಚ್ಚರಿಕೆಯ ಅಂಶಗಳು ಪ್ರತಿಧ್ವನಿಸುತ್ತವೆ. ಇನ್ನೊಂದು ಕಡೆ ಒಬ್ಬ ನಿಂತ ಭಿಕ್ಷುಕ ಅಮ್ಮಾ ಅಮ್ಮಾ ಎಂದ ! ಹಾಗೆಯೇ ಎಷ್ಟೋ ತಲೆಗಳ ಸವರಿದ ಕತ್ತಿಗಳು ಈಗ ಮ್ಯೂಜಿಯಂನಲ್ಲಿ ಪ್ರದರ್ಶನಕ್ಕಿವೆ ! ಇಲ್ಲಿ ಸಾಮಾಜಿಕ ಪ್ರಜ್ಞೆ ಪ್ರಕರ್ಷಿಸುತ್ತದೆ.
ಹತ್ತಾರು ವರುಷ ನೆರಳಾಗಿ ನಿಂತ ಮರ, ತೊಲೆಯಾಗಿ ಉಳಿಯಿತು ನೂರಾರು ವರುಷ, ನೂರು ವರುಷ ಆಳಿದ ಅರಸ ಹೆಣವಾಗಿ ಉಳಿಯಲಿಲ್ಲ ಮೂರು ದಿವಸ. ಹಾಗೆಯೇ ಬತ್ತಿಯಾಗಿ ಹತ್ತಿನೊಂದುಕೊಳ್ಳುತ್ತೆ, ತನ್ನ ಒಡಲೊಳಗೆ ಬೆಚ್ಚಗೆ ಅಡಗಿದ್ದ ಬೀಜವೇ ಎಣ್ಣೆಯಾಗಿ ತನ್ನನ್ನೇ ಸುಡುತ್ತಿದೆಯೆಂದು ಹೇಳುವಲ್ಲಿ ಕಾಲಘಟ್ಟಗಳ ಸಾಮಾಜಿಕ ಬದಲಾವಣೆ, ರೂಪಾಂತರಗಳು ಪಲ್ಲವಿಸುವುದನ್ನು ಕಾಣಬಹುದು ಎಂದು ನುಡಿದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಸಂಚಾಲಕರಾದ ಕೊಟ್ರೇಶ್ ಎಸ್. ಉಪ್ಪಾರ್, ಶಾಂತ ಅತ್ನಿ, ರಾಜೇಶ್ವರಿ ಹುಲ್ಲೇನಹಳ್ಳಿ, ಎಸ್. ಲಲಿತ, ನಂಜಪ್ಪ, ಶೈಲಜಾ ಹಾಸನ, ಎಚ್. ಸಿ. ಭವ್ಯ, ಭಾರತಿ ಹಾದಿಗೆ, ವಾಸು ಎಸ್.ಕೆ, ಚಲಂ, ಸುಶೀಲಾ ಸೋಮಶೇಖರ್, ಪೂರ್ಣಿಮಾ ಜಗದೀಶ್, ದ್ಯಾವನೂರು ಮಂಜುನಾಥ, ಎಚ್.ಎಸ್.ರವಿ ಮುಂತಾದವರು ಕವಿತೆ ವಾಚಿಸಿದರು. ಕಾರ್ಯಕ್ರಮದಲ್ಲಿ ತಿರುಪತಿಹಳ್ಳಿ ಶಿವಶಂಕರಪ್ಪ, ಚಿನ್ನೇನಹಳ್ಳಿ ಸ್ವಾಮಿ, ಕುಮಾರಿ ಅನುಷಾ ಸೋಮಶೇಖರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷಿಣಿ ಲೀಲಾವತಿ, ಗಿರೀಶ್ ಮುಂತಾದವರು ಭಾಗವಹಿಸಿದ್ದರು.
ಸಂಚಾಲಕರಾದ ಕೊಟ್ರೇಶ್ ಎಸ್. ಉಪ್ಪಾರ್ ರವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

0 comments:

Post a Comment

 
Blogger Templates