.JPG)
ಹಾಸನ, ಏ. 7: ಪ್ರಸುತ ನಮ್ಮ ಜ್ಞಾನ ಪುಸ್ತಕ, ಪತ್ರಿಕೆಯಲ್ಲಷ್ಷೇ ಇರುವುದರಿಂದ ಇದು ಒಂದು ರಾಜ್ಯಕ್ಕೆ ಸೀಮಿತ. ಆದರೆ ‘ಬ್ಲಾಗಿಂಗ್’ ಎಂಬುದು ಎಲ್ಲೆಯಿಲ್ಲದ ಒರತೆ, ಅಲ್ಲಿ ಇಡೀ ಜಗತ್ತು ಓದುತ್ತದೆ, ನೋಡುತ್ತದೆ. ಆದ್ದರಿಂದ ‘ಬ್ಲಾಗಿಂಗ್’ ಸಾಹಿತ್ಯ, ಸಂಸ್ಕøತಿ, ಕಲೆ, ವಾಸ್ತುಶಿಲ್ಪ ಇತ್ಯಾದಿಗಳಿಗೆ ವೈಶಾಲ್ಯತೆಯನ್ನು ತಂದು ಕೊಡುವುದರ ಮೂಲಕ ಪ್ರತಿದಿನ ಸಾವಿರಾರು ಓದುಗ , ನೋಡುಗರ ದರ್ಶನ ಮಾಡಿಸುವ ಅತ್ಯಾಧುನಿಕ ತಂತ್ರಜ್ಞಾನವಾಗಿದೆ ಎಂದು ಸರಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ನಾರಾಯಣ ಪ್ರಸಾದ್‍ರವರು ಹೇಳಿದರು.
ನಗರದ ಶಾಂತಿ ನಗರದಲ್ಲಿ ಶ್ರೀಮತಿ ವೇದಶ್ರೀ ರಾಜ್‍ರವರ ಪ್ರಾಯೋಜತ್ವದಡಿಯಲ್ಲಿ ಭಾನುವಾರ ನಡೆದ 205 ನೆಯ ಮನೆ ಮನೆ ಕವಿಗೋಷ್ಠಿಯಲ್ಲಿ ಅವರು ‘ಸಾಹಿತ್ಯ ಪ್ರಸಾರದಲ್ಲಿ ಆಧುನಿಕ ತಂತ್ರಜ್ಞಾನವಾದ ಬ್ಲಾಗಿಂಗ್ ಪಾತ್ರ’ ಎಂಬ ವಿಷಯದಡಿಯಲ್ಲಿ ಪ್ರಾತ್ಯಾಕ್ಷಿಕೆ ಹಾಗೂ ಉಪನ್ಯಾಸ ನೀಡಿದರು.
.JPG)
ಒಂದು ಪುಸ್ತಕ ಸಾವಿರ ಪ್ರತಿಗಳು ಅಚ್ಚಾದರೆ ಸಾವಿರ ಜನಗಳು ಒಂದು ಎಲ್ಲೆಯೊಳಗೆ ಓದಲು ಮಾತ್ರ ಸಾಧ್ಯ, ಆದರೆ ಅದೇ ಪುಸ್ತಕವನ್ನು ಗಣಕೀಕೃತಗೊಳಿಸಿ ಬ್ಲಾಗ್‍ಗೆ ಹಾಕಿದರೆ ಶಾಶ್ವತವಾಗಿ ಉಳಿಯುವುದರ ಜೊತೆಗೆ ಪ್ರಪಂಚದಾದ್ಯಂತ ಸಹಸ್ರಾರು ಕನ್ನಡಿಗರು ಏಕಕಾಲಕ್ಕೆ ಓದುವುದು. ಆದ್ದರಿಂದ ಪ್ರತಿಯೊಬ್ಬ ಲೇಖಕರು ಬ್ಲಾಗಿಂಗ್ ಬಗ್ಗೆ ಗಂಭಿರವಾಗಿ ಆಲೋಚಿಸಬೇಕಾಗಿದೆ. 1990 ರಿಂದ ಈಚೆಗೆ ಬಂದ ಬ್ಲಾಗಿಂಗ್ ಹಾಗೂ ಅಂತರ್ಜಾಲ ವ್ಯವಸ್ಥೆ ಕ್ಷಿಪ್ರಗತಿಯಲ್ಲಿ ಬೆಳೆದು ಬಂದದ್ದು ಅಚ್ಚರಿ. ಈಗಾಗಲೇ ಪ್ರಪಂಚದಾದ್ಯಂತ 2014ರ ಫೆಬ್ರವರಿ ವೇಳೆಗೆ 250 ಮಿಲಿಯನ್ ಬ್ಲಾಗ್ಸ್‍ಗಳು ಕಾರ್ಯ ನಿರ್ವಹಿಸುತ್ತಿವೆ ಎಂಬ ಮಾಹಿತಿಯಿದೆ. ಆದರೆ ಕನ್ನಡದಲ್ಲಿ ಇನ್ನೂ 300 ರಿಂದ 400 ಇರುವುದು ದುರಂತ. ನಾವೇಕೆ ಜಾಗತಿಕ ಓಟದಲ್ಲಿ ಹಿಂದಿದ್ದೇವೆ ಎಂಬುದನ್ನು ಅರಿಯಬೇಕಾಗಿದೆ ಎಂದರು. ನಂತರ ಪ್ರೊಜಕ್ಟರ್‍ನಲ್ಲಿ ಹಂತ ಹಂತವಾಗಿ ಪ್ರಾತ್ಯಕ್ಷಿಕತೆ ನಡೆಸಿಕೊಟ್ಟರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಸಂಚಾಲಕರಾದ ಕೊಟ್ರೇಶ್ ಎಸ್. ಉಪ್ಪಾರ್, ಎನ್. ಎಲ್. ಚನ್ನೇಗೌಡ, ಡಾ. ಕೆ.ಕೆ. ಜಯಚಂದ್ರಗುಪ್ತ, ಎಚ್.ಎಸ್. ರವಿ ಸಮುದ್ರವಳ್ಳಿವಾಸು, ಜಿ.ಎಸ್. ಕಲಾವತಿ ಮಧುಸಾದನ್, ಬಿ.ಎಸ್. ವನಜಾಕ್ಷಿ, ಚೂಡಾಮಣಿ, ಲಲಿತ ಎಸ್, ಬಿ.ವೇದಾವತಿ, ಪದ್ಮಾವತಿ, ಎಚ್. ವೇದಶ್ರೀರಾಜ್, ಚಿನ್ನೇನಹಳ್ಳಿ ಸ್ವಾಮಿ, ಚಂದ್ರಕಾಂತ ಪಡೆಸೂರ, ಎಚ್. ವೇದಾವತಿ, ಸುಕನ್ಯ ಮುಕುಂದ, ಸಿಂಧುಶ್ರೀ ಮುಕುಂದ, ದ್ಯಾವನೂರು ಮಂಜುನಾಥ ಮುತಾಂದವರು ಕವಿತೆ ವಾಚಿಸಿದರು.

ಕಾರ್ಯಕ್ರಮದಲ್ಲಿ ಬಿ.ಜಿ.ವಿ.ಎಸ್ ನ ಜಿಲ್ಲಾ ಉಪಾಧ್ಯಕ್ಷರಾದ ಅಹಮ್ಮದ್ ಹಗರೆ, ಗೌರಮ್ಮ, ಪ್ರಜ್ಞಾ, ಶಿವಾಗ್ನಿ ಮುತಾಂದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ನಾಡಿನ ಹಿರಿಯ ಸಾಹಿತಿ ಯಶವಂತ ಚಿತ್ತಾಲರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೊ. ನಾರಾಯಣ ಪ್ರಸಾದ್‍ರವರನ್ನು ಮನೆ ಮನೆ ಕವಿಗೋಷ್ಠಿವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಲಾವತಿ ಮಧುಸೂದನ್ ಪ್ರಾರ್ಥಿಸಿದರು. ಪ್ರಾಯೋಜಕರಾದ ಶ್ರೀಮತಿ ವೇದಶ್ರೀರಾಜ್ ಸ್ವಾಗತಿಸಿದರು. ಸಂಚಾಲಕರಾದ ಕೊಟ್ರೇಶ್ ಎಸ್. ಉಪ್ಪಾರ್ ನಿರೂಪಿಸಿ, ವಂದಿಸಿದರು.
0 comments:
Post a Comment