ಅವರು ನಗರದ ಮಹರಾಜ ಪಾರ್ಕಿನಲ್ಲಿರುವ ವಿವೇಕಾನಂದ ಯೋಗಶಾಲೆಯಲ್ಲಿ ಕಲಾವತಿ ಮಧುಸೂದನ್ ಅವರ ಪ್ರಾಯೋಜಕತ್ವದಲ್ಲಿ ನಡೆದ 202 ನೇ ಮನೆ ಮನೆ ಕವಿಗೋಷ್ಠಿಯಲ್ಲಿ ‘ಜಿ.ಎಸ್.ಎಸ್ ಕಾವ್ಯ ಒಂದು ಚಿಂತನೆ’ ಎಂಬ ವಿಷಯದಡಿ ವಿಚಾರ ಮಂಡನೆ ಮಾಡುತ್ತಾ ಜಾತ್ಯಾತೀತ ಮನೋಭಾವದವರು,
ವೈಚಾರಿಕತೆಯುಳ್ಳವರಾದ ಡಾ. ಜಿ.ಎಸ್. ಶಿವರುದ್ರಪ್ಪನವರು ತಮ್ಮ ಜೀವನದುದ್ದಕ್ಕೂ ಎಲ್ಲರೊಂದಿಗೆ ಗೌರವ, ಪ್ರೀತಿಯಾದರ ಹೊಂದಿದ್ದರು. ಇವರ ಕಾವ್ಯ ಮೀಮಾಂಸ ಕೃತಿಗಳು ಓದುಗರಿಗೆ ಮಾರ್ಗದೀವಿಗೆಯಾಗಿವೆ. ಜಿ.ಎಸ್.ಎಸ್ ಅವರ ಕವಿತೆಗಳು ವ್ಯಷ್ಠಿ ಪ್ರಜ್ಞೆಯಂತೆ ಸಮಷ್ಠಿಯುಳ್ಳವಾಗಿವೆ. ಇವರ ಕವಿತೆಗಳಲ್ಲಿ ಮಾನವೀಯ ಮೌಲ್ಯವಿದೆ. ಸಾಮಾಜಿಕ ಸಂಗತಿ ಕಾವ್ಯ ಸಂಧಾನದಲ್ಲಿ ಹೊರಹೊಮ್ಮುತ್ತ್ತದೆ. ಜಿ.ಎಸ್.ಎಸ್ ಅವರು ಕಾವ್ಯ ಕರ್ಮಿ. ಅವರ ಇಡೀ ಬದುಕು ಹಣತೆಯ ಸಾಲು ದೀಪದಿಂದ ಅಲಂಕೃತವಾಗಿದೆ. ಹಾಗಾಗಿಯೇ ಜಿ.ಎಸ್.ಎಸ್. ಅವರು ಹಣತೆಯ ಕವಿಯೆಂದೇ ಪ್ರಸಿದ್ಧರು. ಕನ್ನಡ ಸಾಹಿತ್ಯದ ಬೆಳಕನ್ನು ಬಹಳ ದೂರದವರೆಗೂ ಬೆಳಗಿರುವ ಇವರು ಎಂದೆಂದೂ ನಂದದ ಕಿಚ್ಚನ್ನು ಹರಿಯಬಿಟ್ಟಿದ್ದಾರೆ. ಅವರು ಭೌತಿಕವಾಗಿ ಇಲ್ಲವಾದರೂ ಸಾವಿಲ್ಲದ ಭೌದ್ಧಿಕತೆಯನ್ನು ನಮಗೆ ಬಿಟ್ಟು ಹೋಗಿದ್ದಾರೆ. ಯಾವುದೇ ಧರ್ಮಪಂಥಕ್ಕೆ ಒಳಗಾಗದ ಇವರ ಬಯಲ ಬದುಕಿನ ಕಾವ್ಯ ಕೃಷಿಯಲ್ಲಿ ಜೀವಪರ ದನಿಯಿದೆ, ಕಾವ್ಯ ಕೌಶಲ್ಯವಿದೆ. ಕಾವ್ಯದ ಎಲ್ಲಾ ಆಂತರಿಕ ಕ್ರಿಯಾಶೀಲತೆಯನ್ನು ಇವರ ಕವಿತೆಗಳಲ್ಲಿ ಕಾಣಬಹುದು ಎಂದರು.
ನಂತರ ನಡೆದ ಜಿ.ಎಸ್.ಎಸ್. ಗೀತಗಾಯನದಲ್ಲಿ ಹೆಚ್. ದೇವೀರಮ್ಮ, ಸಿ.ರಾಣಿ, ಎಚ್. ವೇದಾವತಿ, ಸುರೇಶ್ ಗುರೂಜಿ, ಎಂ. ಶಿವಣ್ಣ, ಕಲಾವತಿ ಮಧುಸೂದನ್, ಸ್ಪಂದನ ವೇದಿಕೆ ಮಕ್ಕಳು ಭಾವಗೀತೆಗಳನ್ನು ಹಾಡಿದರು.
ಕೊನೆಯದಾಗಿ ನಡೆದ ಕವಿಗೋಷ್ಠಿಯಲ್ಲಿ ಸಂಚಾಲಕರಾದ ಕೊಟ್ರೇಶ್ ಎಸ್. ಉಪ್ಪಾರ್, ಲಲಿತ ಎಸ್., ಎನ್.ಎಲ್. ಚನ್ನೇಗೌಡ, ಹರಿಹರಪುರ ಶ್ರೀಧರ್, ಹೆಚ್.ಬಿ. ರಮೇಶ್, ಸುರೇಶ್ ಗುರೂಜಿ,ನವಾಬ್‍ಬೇಲೂರು, ಭೈರಪ್ಪಾಜಿ, ಗೊರೂರು ಅನಂತರಾಜು, ಶಾಂತಅತ್ನಿ, ವೇದಾವತಿ ಬಿ, ಗೊರೂರು ಶಿವೇಶ್, ಗಂಗಾಧರ್, ರಾಜೇಶ್ವರಿ ಹುಲ್ಲೇನಹಳ್ಳಿ, ಶಿವಣ್ಣ, ದ್ಯಾವನೂರು ಮಂಜುನಾಥ, ವಾಸು ಸಮುದ್ರವಳ್ಳಿ, ಸುಕನ್ಯ ಮುಕುಂದ, ಗಿರೀಶ್, ಕೆ. ತುಕಾರಾಂ ರಾವ್ ಮುಂತಾದವರು ಕವಿತೆ ವಾಚಿಸಿದರು.
ಸ್ಪಂದನ ವೇದಿಕೆ ಮಕ್ಕಳು ಪ್ರಾರ್ಥಿಸಿದರು, ಸಂಚಲಕರಾದ ಕೊಟ್ರೇಶ್ ಎಸ್. ಉಪ್ಪಾರ್‍ರವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.



0 comments:
Post a Comment