
ಪಾಶ್ಚಾತ್ಯರು ಬಳಸುವ ವಿಮರ್ಶೆ ಪದಕ್ಕೆ ಭಾರತೀಯ ಸಾಹಿತ್ಯ ಪರಂಪರೆಯಿಂದ ಬಳಸುವ ಮೀಮಾಂಸೆ ಪದಕ್ಕೆ ಮೂಲತಃ ವ್ಯತ್ಯಾಸ ಕಾಣದಿದ್ದರೂ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ನಾವು ಕಾವ್ಯ ಎಂದು ಒಪ್ಪುತ್ತೇವೆ. ಹಿಂದೆ ಒಬ್ಬ ಮೀಮಾಂಸಕಾರ ಕಾವ್ಯೇಶು ನಾಟಕಂ ರಮ್ಯಂ’ ಎಂದು ಹೇಳಿದ್ದಾನೆ. ಕಾವ್ಯಗಳಲ್ಲೆಲ್ಲಾ ನಾಟಕವು ರಮ್ಯವಾದುದು ಎಂದರೆ ಕಾವ್ಯಗಳಲ್ಲೆಲ್ಲಾ ನಾಟಕವು ಸುಂದರ ಎಂದರೆ ಕಥೆ, ಕಾವ್ಯ, ನಾಟಕ ಎಲ್ಲಾ ಕಾವ್ಯ ಎಂದೇ ಒಪ್ಪಿಕೊಳ್ಳುತ್ತಿದ್ದೆವು ಎಂದು ಖ್ಯಾತ ಸಾಹಿತಿಗಳಾದ ಡಾ|| ಎಚ್.ಎಲ್. ಮಲ್ಲೇಶಗೌಡರು ಹೇಳಿದರು.
ಅವರು ಹೊಸಲೈನ್ ರಸ್ತೆಯ ಎಸ್.ಜಿ.ಆರ್. ಶಾಲೆಯಲ್ಲಿ ಶ್ರೀಮತಿ ಮಮತಶಿವುರವರ ಪ್ರಾಯೋಜಕತ್ವ
ದಲ್ಲಿ ನಡೆದ 204ನೇ ಮನೆ ಮನೆ ಕವಿಗೋಷ್ಠಿಯಲ್ಲಿ ‘ಕಾವ್ಯ ಮೀಮಾಂಸೆ ಭಾರತೀಯ ಸಾಹಿತ್ಯ ಪರಂಪರೆ’ ಎಂಬ ವಿಷಯದಡಿ ಉಪನ್ಯಾಸ ಮಾಡುತ್ತಾ ಮೊದಲು ಕಾವ್ಯ ಮೀಮಾಂಸೆಯ ಪರಿಕಲ್ಪನೆಗೆ ಭಾರತೀಯರ ಆಲೋಚನೆಗಳು, ಸ್ಪಂದಿಸುವಿಕೆ ತಿಳಿಯಬೇಕಾದರೆ ಭರತನ ನಾಟ್ಯ ಶಾಸ್ತ್ರ ಬರೆಯುವವರೆಗೆ ಕಾಯಬೇಕಾಯಿತು. ಕಾವ್ಯ ಮೀಮಾಂಸೆಯ ಮೂಲ ಕುಡಿಯೊಡೆದದ್ದು ಭರತನ ನಾಟ್ಯಶಾಸ್ತ್ರದಲ್ಲಿ ಏಕೆಂದರೆ ನಾಟ್ಯಕ್ಕಾಗಿ ಬೇಕಾದ ಕಾವ್ಯ, ಸಂಭಾಷಣೆ, ಸಾಹಿತ್ಯ ಅವಶ್ಯಕತೆಯಿದ್ದಂತೆ ಅದರ ರೂಪುರೇಷೆಗಳಿಗೆ ಬೇಕಾದ ಸಾಂದರ್ಭಿಕ ಅಂಶಗಳನ್ನು ಈ ಕೃತಿಯಲ್ಲಿ ಕಾಣುತ್ತೇವೆ. ಆದ್ದರಿಂದಲೇ ಬಾರತೀಯ ಕಾವ್ಯ ಮೀಮಾಂಸೆಯ ಮೂಲ ಕೃತಿಯೇ ಭರತನ ನಾಟ್ಯಶಾಸ್ತ್ರವಾಗಿದೆ. ಅಂತೆಯೇ ಬಾಮಹ ಮೀಮಾಂಸೆಯನ್ನು ಅಲಂಕಾರವಾಗಿ ಬಳಸಿ, ಅಲಂಕಾರ ಶಾಸ್ತ್ರವೆಂದು ಕರೆದು ಸೌಂದರ್ಯಂ ಅಲಂಕಾರ’ ಎನ್ನುತ್ತಾ ಒಂದು ಕಾವ್ಯ ಸಹಿತವಾಗಿರಬೇಕಾದರೆ ಸೌಂದರ್ಯಮಯವಾಗಿ ಇರಬೇಕು. ಕಾವ್ಯದೊಳಗಿನ ಸೌಂದÀರ್ಯವನ್ನು ವಿವೇಚನೆ ಮಾಡುವ ಶಾಸ್ತ್ರವೇ ಅಲಂಕಾರ ಎಂದು ಕರೆದನು.

ಕಾವ್ಯ ಮೀಮಾಂಸೆಗೆ ಬಾಮಹ ಮತ್ತು ಭರತ ಎರಡು ರೆಕ್ಕೆಗಳಿದ್ದಂತೆ. ಇವರೀರ್ವರು ತಮ್ಮ ತಮ್ಮ ವಿವೇಚನೆಗಳ ದಿಶೆಯಲ್ಲಿ ಮೀಮಾಂಸೆಯ ರೂಪುಗಳನ್ನು ಹೊಳೆಸುತ್ತಾ ಸಾಗಿದರು. ಬಾಮಹನ ನಂತರ ಅಲಂಕಾರ ಶಾಸ್ತ್ರಕ್ಕೆ ಒಂದು ಗಟ್ಟಿತನ ಬಂದದ್ದು ಅದೇ ಮೂರನೇ ಶತಮಾನದಲ್ಲಿದ್ದ ದಂಡಿ’ ಎಂಬ ಕವಿಯ ಮೂಲಕ. ಕಾವ್ಯ ಸೌಂದರ್ಯವಾಗಿ ಕಾಣಬೇಕಾದರೆ, ಶೋಭೆ ಹೆಚ್ಚಿಸುವ ಕಾವ್ಯದೊಳಗಿನ ಧರ್ಮವನ್ನು ಅಲಂಕಾರವೆಂದು ದಂಡಿ ಕರೆಯುತ್ತಾನೆ. ಒಂದು ಕಾವ್ಯಕ್ಕೆ ಶಬ್ದಾಲಂಕಾರ, ಅರ್ಥಾಲಂಕಾರವಿರಬೇಕು. ಹಾಗೆಯೇ ಇದರಡಿ ಬರುವ ಅಲಂಕಾರ. ರೀತಿ, ಗುಣ ಈ ಮೂರು ಕಾವ್ಯ ಮೀಮಾಂಸೆಯ ಮೂಲನೆಲೆಗಳು, ಯಾವುದೇ ಒಂದು ಕಾವ್ಯ ಅಲಂಕಾರ, ರೀತಿ, ಗುಣವನ್ನು ಮೇಳೈಸಿಕೊಂಡರೆ ಅದು ಅತ್ಯದ್ಭುತ ಕಾವ್ಯವಾಗುತ್ತದೆ ಎಂದು ದಂಡಿ ತಿಳಿಸುತ್ತಾನೆ. ದಂಡಿಯ ನಂತರ ಬರುವ ‘ಕುಂತಕ’ ಕಾವ್ಯದ ಒಂದು ಪ್ರಧಾನವಾದ ಅಂಶ ‘ಉಕ್ತಿ’ ಎಂದು ಕರೆಯುತ್ತಾನೆ. ಉಕ್ತಿಯಲ್ಲಿ ಎರಡು ರೀತಿ ಇವೆ. ಉಕ್ತಿ ಎಂದರೆ ಮಾತು, ಪದ ಭಾಷೆ. ಆದ್ದರಿಂದಲೇ ಸ್ವಭಾವೋಕ್ತಿ ಮತ್ತು ವಕ್ರೋಕ್ತಿ ಎಂದು ಕರೆದಿದ್ದಾನೆ. ಮುಂದುವರಿದ ಹಾಗೆ ಕಾವ್ಯ ಮೀಮಾಂಸೆಯಲ್ಲಿ ರಸ, ಧ್ವನಿಗಳು ಮೊಳೆಯುತ್ತವೆ. ನಂತರ ಕಾವ್ಯಕ್ಕೆ ಅಲಂಕಾರವೇ ಅಂತಿಮದಲ್ಲಿ ಅದು ಒಂದು ಭಾಗ ಮಾತ್ರ. ಅದರ ಬದಲಿಗೆ ಮೀಮಾಂಸೆ ಎಂಬ ಪದ ಹೆಚ್ಚಾಗಿ ಬಳಕೆಗೆ ಬಂದಿತು. ಆಧುನಿಕ ಸಾಹಿತ್ಯದಲ್ಲಿ ಬಂದರೆ, ಕನ್ನಡದ ಮೂರನೇ ರಾಷ್ಟ್ರಕವಿಯಾದ ಜಿ.ಎಸ್. ಶಿವರುದ್ರಪ್ಪನವರ ಸೌಂದರ್ಯ ಸಮೀಕ್ಷೆ’ ಒಂದು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಉತ್ಕøಷ್ಟ ಗ್ರಂಥವಾಗಿದೆ. ಕವಿಗಳು ಯಾವಾಗಲೂ ಕಾವ್ಯವನ್ನು ಬೇರೆಯಾಗಿ ನೋಡದೇ ಸೌಂದರ್ಯಮಯವಾಗಿ ಕಾಣಬೇಕು.ಅದರಲ್ಲಿನ ಉತ್ತಮವಾದುದನ್ನು ಸವಿಯಬೇಕಾಗಿದೆ ಎಂದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಸಂಚಾಲಕರಾದ ಕೊಟ್ರೇಶ್ ಎಸ್. ಉಪ್ಪಾರ್, ಡಾ|| ಕೆ.ಕೆ. ಜಯಚಂದ್ರಗುಪ್ತ, ಶೀಟಿ, ಚಂದ್ರಕಾಂತ ಪಡೆಸೂರ, ಶಾಂತ ಅತ್ನಿ, ವನಜಾಕ್ಷಿ, ವಾಸು ಎಸ್.ಕೆ, ಬಿ. ವೇದಾವತಿ, ಆಹನ, ಭಾರತಿ ಹಾದಿಗೆ, ಸುಕನ್ಯ ಮುಕುಂದ, ಕುಮುದ ಎಂ.ಆರ್, ಪದ್ಮ ಮಂಜುನಾಥ್, ಶ್ರೀವಿಜಯ ಹಾಸನ, ಗಿರಿಜಾದಿನಕರ, ರೂಪಹಾಸನ, ಕಲಾವತಿಮಧುಸೂದನ್, ಗೊರೂರುಶಿವೇಶ್, ಎನ್.ಎಲ್.ಚನ್ನೇಗೌಡ, ಸುರೇಶ್‍ಗುರೂಜಿ, ಮಮತಾಶಿವು ಮುಂತಾದವರು ಕವಿತೆ ವಾಚನ ಮಾಡಿದರು.ಕಾರ್ಯಕ್ರಮದಲ್ಲಿ ಅಹಮ್ಮದ್ ಹಗರೆ, ಶಿವು, ಗೋಪಾಲ್ ಮುಂತಾದವರು ಹಾಜರಿದ್ದರು.
ಶಾಂತ ಅತ್ನಿ ಪ್ರಾರ್ಥಿಸಿದರು, ಸಂಚಾಲಕರಾದ ಕೊಟ್ರೇಶ್ ಎಸ್.ಉಪ್ಪಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
0 comments:
Post a Comment